Thursday, February 14, 2008

ಶ್ರೀಭಾರತೀ ವಿದ್ಯಾಲಯ

ಪ್ರತಿಯೊಬ್ಬನಿಗೂ ತಾನು ಸಮಾಜಕ್ಕೆ ಎನಾದ್ರು ಕೊಡಬೇಕೂ ಅನ್ನುವ ಭಾವನೆ ಇರತ್ತೆ. ಯಾವ ರೂಪದಲ್ಲಿಯಾದರೂ ಆಗಬಹುದು. ಅದರಲ್ಲೂ ತಾನ ಇಷ್ಟ ಪಡುವ ಕ್ಷೇತ್ರವಾದರೆ ಇನ್ನು ಚೆನ್ನ.
ಶ್ರೀರಾಮಚಂದ್ರಾಪುರ ಮಠದೊಂದಿಗೆ ನನ್ನ ಒಡನಾಟ ಸುಮಾರು ೧೦-೧೨ ವರ್ಷಗಳಿಂದ ಇದೆ. ಮೊದಲು ಅಜ್ಜ ಬೆಂಗಳೂರಿಗೆ ಬಂದಾಗ ಅಜ್ಜನ ಜೊತೆ ಹೋಗ್ತಾಯಿದ್ದೆ. ನಂತರ ಅಲ್ಲಿಯ ಸಂಪರ್ಕ ಜಾಸ್ತಿಯಾಗಿದ್ದು ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳವರು ಪೀಠಾರೋಹಣ ಮಾಡಿದ ಮೇಲೆಯೇ. ಮಠದ ಎಲ್ಲ ಕಾರ್ಯಕ್ರಮಗಳಲ್ಲಿ ನನ್ನ ಅಳಿಲು ಸೇವೆ ಮಾಡ್ತಾಯಿದೀನಿ. ಮೊದ್ಲಿಂದ ನನಗೆ ಮಠದ ವೆಬ್ ಸೈಟ್ ಮಾಡ್ಬೇಕು ಅಂತಿತ್ತು. ಆದ್ರೆ ಈಗಾಗ್ಲೆ ಅದನ್ನ ಒಬ್ಬರು ಸೇವಾರೂಪದಲ್ಲಿ ಮಾಡ್ತಾಯಿದ್ದಿದ್ರಿಂದ ನನಗೆ ಅವಕಾಶ ಸಿಕ್ಕಿರಲಿಲ್ಲ. ಮೊನ್ನೆ ಹಿರಿಯರಾದ ಪಿ.ಜಿ.ಭಟ್ ನನ್ನ ಹತ್ರ ಶ್ರೀಭಾರತೀ ವಿದ್ಯಾಲಯದ ವೆಬ್ ಸೈಟ್ ಮಾಡೋಕೆ ಆಗತ್ತಾ ಅಂದ್ರು. ತಕ್ಷಣ ಹೂಂ ಅಂದೇ. ಶ್ರೀಭಾರತೀ ವಿದ್ಯಾಲಯದ ಬೆಂಗಳೂರಿನ ಆರ್.ಪಿ.ಸಿ ಲೇಔಟ್ ನಲ್ಲಿದೆ. ಇದು ಮಠದಿಂದ ನಡಿತಾಯಿರೋ ಶಿಕ್ಷಣ ಸಂಸ್ಥೆ.



ನಾಳೆ ಶ್ರೀಭಾರತೀ ವಿದ್ಯಾಲಯದ ವೆಬ್ ಸೈಟ್ ಅನಾವರಣಗೊಳ್ತಾಯಿದೆ. ನನ್ನ ಬಿಡುವಿನ ಸಮಯದಲ್ಲಿ ಮಾಡಿದ ವೆಬ್ ಸೈಟ್. ಇದರಲ್ಲಿ ನನ್ನ ಮಡದಿ ಜಯಶ್ರೀ ಪಾಲು ಇದೆ.

ಭಾರತೀವಿದ್ಯಾಲಯದ ಅಂತರಜಾಲ ತಾಣ: http://bharathividyalaya.in

4 comments:

ವಿ.ರಾ.ಹೆ. said...

Gudwork Yajneshanna,

Website address ???

ಮಹೇಶ್ ಪುಚ್ಚಪ್ಪಾಡಿ said...

ಉತ್ತಮವಾದ ಕೆಲಸ ಮಾಡಿದ್ದೀರಿ.ಭಾರತೀ ವಿದ್ಯಾಲಯಕ್ಕೆ ಇದು ಅಗತ್ಯವಾಗಿತ್ತು ಅಂತ ನನ್ನ ಅನಿಸಿಕೆ.

ಯಜ್ಞೇಶ್ (yajnesh) said...

ಧನ್ಯವಾದಗಳು ವಿಕಾಸ್ ಮತ್ತು ಪುಚ್ಚಪ್ಪಾಡಿಯವರೇ.

ವೆಬ್ ಸೈಟ್ ಸದ್ಯ http://dharmabharathi.org/bharathividyalaya ಯಲ್ಲಿ ಲಭ್ಯವಿದೆ. ನಂತರ ಇದನ್ನು http://www.bharathividyalya.in ವರ್ಗಾಯಿಸಲಾಗುತ್ತದೆ.

ಯಜ್ಞೇಶ್ (yajnesh) said...

ವೆಬ್ ಸೈಟ್ http://www.bharathividyalaya.in ಲಭ್ಯವಿದೆ