ಮನಸ್ಸಲ್ಲಿ ಏನೇನೋ ಬರಿಬೇಕು ಅಂತ ಯಾವಾಗ್ಲು ಅನ್ಸತ್ತೆ. ಆದ್ರೆ ಈ ಹಾಳು ಸೋಮಾರಿತನ ಬರಿಯೋಕೆ ಬಿಡಲ್ಲ. ಕಾಟಚಾರಕ್ಕೆ ಬರೀಯೋಕೆ ಆಗಲ್ಲ. ಅದು ಒಳಮನಸ್ಸಿಂದ ಬರ್ಬೇಕು. ಯಾವುದೇ ಲೇಖನ, ಕಥೆ ಬರಿವಾಗ ನಾನದರಲ್ಲಿ ಲೀನವಾಗಿರ್ತೀನಿ. ಆ ದಿನವಿಡೀ ಅದರ ಗುಂಗಿನಲ್ಲಿರ್ತೀನಿ. ಮನಸ್ಸು ಎಲ್ಲೋ ಇರತ್ತೆ. ಕೆಲಸದ ಮೇಲೆ ಗಮನ ಕಡಿಮೆಯಾಗತ್ತೆ. ಈ ಕಾರಣದಿಂದ ಬರಿಯೋ ಅಭ್ಯಾಸ ಕಡಿಮೆಯಾಗಿದ್ದು ಅನ್ಸತ್ತೆ.
ಹೌದು, ನಾನೀಗ ಬರಿಲೇಬೇಕು. ದಿನಾ ಅದನ್ನೇ ಯೋಚಿಸ್ತಾ ಇರ್ತೀನಿ. ಏನ್ ಬರೀಲಿ, ಹ್ಯಾಗೆ ಬರೀಲಿ ಅಂತ. ಇನ್ನು ಕೆಲವೇ ದಿನಗಳಲ್ಲಿ ಅಜ್ಜನ ವರ್ಷಾಂತ. ಅಜ್ಜನ ಹೆಸರಲಿ ಒಂದು ಪುಸ್ತಕ ತರ್ಬೇಕು ಅಂತ ಮೊಮ್ಮಕ್ಕಳಾದ ನಮ್ಮ ಆಸೆ. ಬರೋಬ್ಬರಿ ಎಂಬತ್ತು ವರ್ಷದ ಮೇಲೆ ಸಂಭವಿಸಿದ ಮೊದಲ ಸಾವಾಗಿತ್ತು. ಅಣ್ಣ ಮನೆ ಬಿಟ್ಟು ಹೋದಾಗ ಬೇಸರವಾಗಿತ್ತು. ಆದ್ರೇ ಏಲ್ಲೋ ಕಣ್ಣ ಮುಂದೆ ಇರ್ತಾರೆ ಅನ್ನೋ ನಂಬಿಕೆಯಿತ್ತು. ಆದ್ರೆ ಅಜ್ಜ ಹೋಗಿ ವರ್ಷವಾದರು ಇನ್ನು ನೋವು ಮಾಸಿಲ್ಲ. ಹುಟ್ಟು ಸಾವು ಜಗತ್ತಿನ ನಿಯಮ. ಯಾರೂ ಶಾಶ್ವತವಲ್ಲ ಅನ್ನೋ ಸತ್ಯ ತಿಳಿದಿದ್ದರೂ ಕೆಲವೊಮ್ಮೆ ಅಜ್ಜನೊಂದಿಗೆ ಕಳೆದ ಕ್ಷಣಗಳು ನೆನಪಿಗೆ ಬಂದಾಗ ನೋವಾಗತ್ತೆ.
ನಾವೆಲ್ಲ ಸೇರಿ ಅಜ್ಜನ ಹೆಸರಲ್ಲಿ 2005ರಲ್ಲಿ "ಮಹಾಬಲ" ಪ್ರತಿಷ್ಟಾನಮ್ ಪ್ರಾರಂಭ ಮಾಡಿದ್ವಿ(ಅಜ್ಜನ ಹೆಸರು ಮಹಾಬಲೇಶ್ವರ ಭಟ್). ಶ್ರೀರಾಘವೇಶ್ವರಭಾರತೀ ಸ್ವಾಮಿಗಳವರು ಅದನ್ನು ಉದ್ಘಾಟಿಸಿದ್ದರು. ಅಜ್ಜನ ಹೆಸರಲ್ಲಿ ನಮಗೆ ಸಾದ್ಯವಾದ ಒಳ್ಳೆಯ ಕೆಲಸಗಳನ್ನು ಮಾಡಬೇಕು ಅಂತ ನಮ್ಮ ಆಸೆ. ಒಂದು ವರ್ಷ ಚದರವಳ್ಳಿಯ ಶಾಲೆಯ ಜವಾಬ್ದಾರಿಯನ್ನು ನಿರ್ವಹಿಸಿದೆವು.
ಅಜ್ಜನ ವರ್ಷಾಂತಕ್ಕೆ ಒಂದು ಪುಸ್ತಕ ತರಬೇಕು. ಅದರಲ್ಲಿ ನಮ್ಮ ಮನೆಯವರೆಲ್ಲ ಅಜ್ಜನ ಬಗ್ಗೆ ಲೇಖನ, ಕವನ ಬರೀಬೇಕು, ಅಜ್ಜನ ಆತ್ಮೀಯರ ಹತ್ತಿರ ಲೇಖನ ಬರಿಸ್ಬೇಕು, ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಅಜ್ಜನ ಹೆಸರಲ್ಲಿ ಗೌರವಿಸಬೇಕು, ಬಡತನದಲ್ಲಿರುವ ವಿಧ್ಯಾರ್ಥಿಗಳಿಗೆ ಸಹಾಯ ಮಾಡಬೇಕು, ನಮ್ಮದೇ ಆದ ಪ್ರಕಾಶನದಿಂದ ಪುಸ್ತಕಗಳನ್ನು ತರಬೇಕು, ಮನೆಯಲ್ಲಿ ಅಜ್ಜನ ಚಿತ್ರ ಸಂಗ್ರಹವಾಗಬೇಕು, ಪ್ರತಿವರ್ಷ ಅಜ್ಜನ ಹೆಸರಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಬೇಕು...ಅಂತೆಲ್ಲಾ ನಾವು ತೀರ್ಮಾನಿಸಿದೆವು.
ಈಗ ಮೊದಲಿಗೆ ಪುಸ್ತಕ ಬರಬೇಕು. ಅಜ್ಜನ ಬಗ್ಗೆ ನಾವು ಲೇಖನ ಬರಿಬೇಕು.... ಎನ್ ಬರಿಯೋದು ಅಂತ ಗೊತ್ತಾಗ್ತಾ ಇಲ್ಲ. ಮನಸ್ಸು ಬಾರವಾಗ್ತಾಯಿದೆ.
ಮಹಾಬಲ ಪ್ರತಿಷ್ಟಾನಮ್ ಬಗ್ಗೆ ನೀವಿಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. http://mahabalatrust.tripod.com
No comments:
Post a Comment