Tuesday, February 19, 2008

ನಾನು ಸ್ವಾಮಿಯಾಗಿದ್ದು...

ಹಾಂ ಕನಸಿನಲ್ಲಿ ಸ್ವಾಮಿಯಾಗಿದ್ದಲ್ಲ!!! ನಿಜವಾಗ್ಲೂ ಆಗಿದ್ದೆ.

"ಮೊನ್ನೆ ಯಜ್ಞೇಶ್ ಸ್ವಾಮಿಗಳು ಮೈಲ್ ಮಾಡಿದ್ರು" ಅಂತ ಗೋಮಾತಾ ಶರ್ಮ ಅವ್ರು ಹೇಳ್ದಾಗ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರಿಗೆ ನಗು ತಡೆಯೋಕಾಗಿಲ್ವಂತೆ. ಆಗ ಅವ್ರು ಆತ ಸ್ವಾಮಿಯಲ್ಲ, ಅವ್ನಿಗೆ ಮದ್ವೆಯಾಗಿದೆ ಅಂತ ನಗ್ತಾ ಹೇಳಿದ್ರಂತೆ.

ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಇಂಜಿನೀಯರ್ಸ್ ಮೀಟಿಂಗ್ ಕೆಲವು ತಿಂಗಳುಗಳ ಹಿಂದೆ ನಡೆದಿತ್ತು. ಅದರ ಇನ್ನುಂದು ಮೀಟಿಂಗ್ ಇದ್ದಿದರಿಂದ ನಾನು ನನ್ನ ಆಫೀಸ್ ಮೈಲ್ ನಿಂದ ಎಲ್ಲರಿಗೂ ವಿಷಯ ತಿಳಿಸಿದ್ದೆ . ಆದ್ರೆ ಅಂದು ನನಗೆ ಅಲ್ಲಿಗೆ ಹೋಗೋಕೆ ಆಗಿರಲಿಲ್ಲ. ಆಗ ಗೋಮಾತಾ ಶರ್ಮ ಅವ್ರು ನನ್ನ ಹೆಸ್ರು ಹೇಳಿದ್ರಂತೆ.

ವಿಷಯ ಏನಪ್ಪ ಅಂದ್ರೆ, ಕಂಪನಿಯಲ್ಲಿ ಮೈಲ್ ಐಡಿ ಕೊಡುವಾಗ ಹೆಸ್ರು.ಅಪ್ಪನ ಹೆಸ್ರು ಅಥವಾ ಉರಿನ ಹೆಸ್ರು ಕೊಡೋದು ಸಹಜ. ನನ್ನ ಅಪ್ಪನ ಹೆಸ್ರು ನಾರಾಯಣಸ್ವಾಮಿ ಭಟ್ . ಆದ್ರೆ ನನ್ನ ರೆಕಾರ್ಡ್ಸ್ ನಲ್ಲಿ ಅದು ಬರೀ ನಾರಾಯಣಸ್ವಾಮಿಯಾಗಿತ್ತು. ನಾನು ಆಫೀಸಿಗೆ ಸೇರೋವಾಗ ಕಾಲಂ ನಲ್ಲಿ ನಾರಾಯಣಸ್ವಾಮಿ ಅಂತನೇ ಬರೆದಿದ್ದೆ. ಆದ್ರೆ ಮದ್ಯೆ ಎಲ್ಲೋ ಗ್ಯಾಪ್ ಇತ್ತು ಅನ್ಸತ್ತೆ. ಅದು yajnesh.swamy ಅಂತ ಆಗಿತ್ತು.

ಅದನ್ನ ಗೋಮಾತಾ ಶರ್ಮ ಅವ್ರು ಸರಿಯಾಗೇ ಹೇಳಿದ್ರು. ಆದ್ರೆ ಅಲ್ಲಿ ಇದ್ದವರಿಗೆ ಒಂದ್ಸಲ ಆಶ್ಚರ್ಯ ಆಯ್ತು. ಎಲ್ಲರಿಗೂ ನಾನು ಭಟ್ ಆಗಿದ್ದೆ. ಆದ್ರೆ ಅಂದು ಸ್ವಾಮಿಯಾಗಿದ್ದೆ.

"ನೀನು ಯಾವಾಗ ಸ್ವಾಮಿಯಾದೆ" ಅಂತ ಈಗ್ಲೂ ನನ್ನ ಫ್ರೆಂಡ್ಸ್ ಕೇಳ್ತ ಇರ್ತಾರೆ. ನಾನು ಸುಮ್ಮನೆ ನಕ್ಕುಬಿಡ್ತೀನಿ

Thursday, February 14, 2008

ಶ್ರೀಭಾರತೀ ವಿದ್ಯಾಲಯ

ಪ್ರತಿಯೊಬ್ಬನಿಗೂ ತಾನು ಸಮಾಜಕ್ಕೆ ಎನಾದ್ರು ಕೊಡಬೇಕೂ ಅನ್ನುವ ಭಾವನೆ ಇರತ್ತೆ. ಯಾವ ರೂಪದಲ್ಲಿಯಾದರೂ ಆಗಬಹುದು. ಅದರಲ್ಲೂ ತಾನ ಇಷ್ಟ ಪಡುವ ಕ್ಷೇತ್ರವಾದರೆ ಇನ್ನು ಚೆನ್ನ.
ಶ್ರೀರಾಮಚಂದ್ರಾಪುರ ಮಠದೊಂದಿಗೆ ನನ್ನ ಒಡನಾಟ ಸುಮಾರು ೧೦-೧೨ ವರ್ಷಗಳಿಂದ ಇದೆ. ಮೊದಲು ಅಜ್ಜ ಬೆಂಗಳೂರಿಗೆ ಬಂದಾಗ ಅಜ್ಜನ ಜೊತೆ ಹೋಗ್ತಾಯಿದ್ದೆ. ನಂತರ ಅಲ್ಲಿಯ ಸಂಪರ್ಕ ಜಾಸ್ತಿಯಾಗಿದ್ದು ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳವರು ಪೀಠಾರೋಹಣ ಮಾಡಿದ ಮೇಲೆಯೇ. ಮಠದ ಎಲ್ಲ ಕಾರ್ಯಕ್ರಮಗಳಲ್ಲಿ ನನ್ನ ಅಳಿಲು ಸೇವೆ ಮಾಡ್ತಾಯಿದೀನಿ. ಮೊದ್ಲಿಂದ ನನಗೆ ಮಠದ ವೆಬ್ ಸೈಟ್ ಮಾಡ್ಬೇಕು ಅಂತಿತ್ತು. ಆದ್ರೆ ಈಗಾಗ್ಲೆ ಅದನ್ನ ಒಬ್ಬರು ಸೇವಾರೂಪದಲ್ಲಿ ಮಾಡ್ತಾಯಿದ್ದಿದ್ರಿಂದ ನನಗೆ ಅವಕಾಶ ಸಿಕ್ಕಿರಲಿಲ್ಲ. ಮೊನ್ನೆ ಹಿರಿಯರಾದ ಪಿ.ಜಿ.ಭಟ್ ನನ್ನ ಹತ್ರ ಶ್ರೀಭಾರತೀ ವಿದ್ಯಾಲಯದ ವೆಬ್ ಸೈಟ್ ಮಾಡೋಕೆ ಆಗತ್ತಾ ಅಂದ್ರು. ತಕ್ಷಣ ಹೂಂ ಅಂದೇ. ಶ್ರೀಭಾರತೀ ವಿದ್ಯಾಲಯದ ಬೆಂಗಳೂರಿನ ಆರ್.ಪಿ.ಸಿ ಲೇಔಟ್ ನಲ್ಲಿದೆ. ಇದು ಮಠದಿಂದ ನಡಿತಾಯಿರೋ ಶಿಕ್ಷಣ ಸಂಸ್ಥೆ.



ನಾಳೆ ಶ್ರೀಭಾರತೀ ವಿದ್ಯಾಲಯದ ವೆಬ್ ಸೈಟ್ ಅನಾವರಣಗೊಳ್ತಾಯಿದೆ. ನನ್ನ ಬಿಡುವಿನ ಸಮಯದಲ್ಲಿ ಮಾಡಿದ ವೆಬ್ ಸೈಟ್. ಇದರಲ್ಲಿ ನನ್ನ ಮಡದಿ ಜಯಶ್ರೀ ಪಾಲು ಇದೆ.

ಭಾರತೀವಿದ್ಯಾಲಯದ ಅಂತರಜಾಲ ತಾಣ: http://bharathividyalaya.in