Tuesday, September 4, 2007

ಕಾರ್ ಆಕ್ಸಿಡೆಂಟ್

ಬಹುದಿನಗಳಿಂದ ಕೊಡೈಕೆನಾಲ್ ಗೆ ಹೋಗಬೇಕೆಂದುಕೊಂಡಿದ್ದು ಅದಕ್ಕೆ ಮೊನ್ನೆ ಶುಕ್ರವಾರ ಮುಹೂರ್ತ ಬಂದಿತ್ತು. ಹೊರಡುವ ತಯಾರಿ ನಡೆಸಲು ಗುರುವಾರ ಆಫೀಸಿನಿಂದ ಬೇಗ ಹೊರಟಿದ್ದೆ. ಮನೆ ಆಫೀಸಿನಿಂದ ಬರೋಬ್ಬರಿ 30 ಕಿ.ಮಿ. ಮನೆ ವಿಜಯನಗರದಲ್ಲಾದರೆ, ಆಫೀಸು ಎಲೆಕ್ಟ್ರಾನಿಕ್ ಸಿಟಿ. ಆಫೀಸಿನ ಹತ್ತಿರ ಮನೆ ಮಾಡು ಅಂತ ಎಲ್ಲ ಹೇಳಿದ್ರು. ಆದರೆ ನನಗೆ ವಿಜಯನಗರ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಕಳೆದ 15 ವರ್ಷಗಳಿಂದ ಆ ಏರಿಯಾ ಅಕ್ಕ ಪಕ್ಕ ಇದ್ದಿದ್ರಿಂದ ನನಗೆ ಅದು ಒಂದು ರೀತಿ ತವರೂರಾಗಿತ್ತು. ಹಾಗಾಗಿ ಆಫೀಸಿನ ಹತ್ರ ಮನೆ ಮಾಡೋ ಐಡಿಯಾ ಬಿಟ್ಟಿದ್ದೆ. ಇದ್ದಿದ್ದು 2 ಆಪ್ಟನ್. ಒಂದು ಆಫೀಸ್ ಬಸ್ ನಲ್ಲಿ ಹೋಗೋದು. ಆದರೆ ಬೆಳೆಗ್ಗೆ 5:30 ಕ್ಕೆ ಏದ್ದು ಸ್ನಾನ ಮಾಡಿ ಹೊರಡಬೇಕಿತ್ತು. ಬಸ್ ಏನಾದ್ರು ತಪ್ಪಿಹೋದ್ರೆ M.G.Road ಆಫೀಸಿಗೆ ಹೋಗಿ 10 ಘಂಟೆ ಶಟಲ್ ನಲ್ಲಿ ಹೋಗ್ಬೇಕು. ಸಂಜೆ 6:15ಕ್ಕೆ ಬಿಟ್ರೆ ಮನೆಗೆ ಬರೋದ್ರಲ್ಲಿ 8:30 ಆಗಿರ್ತಿತ್ತು. ಊಟ ಮಾಡಿ ಮಲಗಿದ್ರೆ ಸಾಕಪ್ಪ ಅನ್ನಿಸ್ತಿತ್ತು. ಜಯಶ್ರೀ ದಿನಾ ಸಂಜೆ ನನ್ನ ಹತ್ರ ಮಾತಾಡಲಿಕ್ಕೆ ಕಾಯ್ತಾಯಿದ್ರೆ ನನಗೆ ಮಲಗಿದ್ರೆ ಸಾಕಪ್ಪ ಅನ್ನಿಸ್ತಾಯಿತ್ತು. ಎಷ್ಟೋ ದಿನಾ ಅವಳು ಮಾತಾಡ್ತಾಯಿದ್ದಾಗ ನಾನು ನಿದ್ದೆ ಮಾಡ್ತಾಯಿದ್ದಿದ್ದು ಇದೆ. ಆಫೀಸ್ ಚೈಂಜ್ ಮಾಡೋದೇ ಒಳ್ಳೇದು ಅನ್ಸೋಕೆ ಶುರುವಾಯ್ತು. ಮೊದಲೆರಡು ಮೂರು ತಿಂಗಳು ಬಸ್ ನಲ್ಲಿ ಹೋದೆ.

ಕೊನೆಗೆ ಹೊಳೆದಿದ್ದು ಇನ್ನೊಂದು ಆಪ್ಟನ್. ಕಾರ್ ತಗೋಂಡು ಹೋಗೋದು ಅಂತ ಪ್ಲಾನ್ ಮಾಡಿದೆ. ಆದ್ರೆ ಹೊಸೂರು ರೋಡಿನ ಟ್ರಾಫಿಕ್ ನಲ್ಲಿ ದಿನಾ ಕಾರ್ ಹೊಡೆಯೋದು ಒಂದು ಸಾಹಸನೇ ಸೈ. ಪ್ರತಿ ಸೆಕೆಂಡಿಗೊಮ್ಮೆ ಗೇರ್ ಚೈಂಜ್ ಮಾಡ್ಬೇಕು. ಆಗ ನೆನಪಾಗಿದ್ದು ಹೊಸದಾಗಿ ಆದ ನೈಸ್ ಕಾರಿಡಾರ್. ಮೈಸೂರು ರೋಡಿಂದ ಎಲೆಕ್ಟ್ರಾನಿಕ್ ಸಿಟಿಗೆ ಬರೊತ್ತೆ ಅಂತ ಗೊತ್ತಾಯ್ತು. ಸರಿ ಅದೇ ರೋಡಿನಲ್ಲಿ ಹೋಗೋದು ಅಂತೇನೋ ತೀರ್ಮಾನ ಮಾಡಿದೆ. ಆದ್ರೆ ದೊರ ಕೇವಲ 45 ಕಿ.ಮಿ(?) ಅಂತ ಗೊತ್ತಾಯ್ತು. ಕಾರ್ ಗೆ ಗ್ಯಾಸ ಹಾಕಿಸಿದ್ದೆ. ಆದ್ರೂ 4500 ಮೇಲೆ ಖರ್ಚು ಬರತ್ತೆ ಅಂತ ಗೊತ್ತಾದ ಮೇಲೆ ಸ್ವಲ್ಪ ಯೋಚ್ನೆ ಪ್ರಾರಂಭ ಆಯ್ತು.ಕೊನೆಗೆ ೫ ಜನರನ್ನು ಹುಡುಕಿ ಎಲ್ಲ ಶೇರ್ ಮಾಡ್ಕೊಳ್ಳೋದು ಅಂತ ಆಯ್ತು. ಸೋ..ಮಾರ್ಚಿನಿಂದ ದಿನಾ 86 ಕಿ.ಮಿ ಡ್ರೈವ್ ಮಾಡ್ತೀನಿ.

ದಿನಾ ಬೆಳೆಗ್ಗೆ 8ಕ್ಕೆ ಮನೆ ಬಿಟ್ರೆ 9ಕ್ಕೆ ಆಫೀಸು ಸೇರ್ತಾಯಿದ್ವಿ. ಸಂಜೆ ಎಲ್ಲರನ್ನೂ ಹೊರಡಿಸಿಕೊಂಡು ಮನೆಗೆ ಬರೋದ್ರಲ್ಲಿ 8 ಆಗ್ತಿತ್ತು. ದೂರ ಜಾಸ್ತಿಯಾಗಿದ್ರೂ ಮಾನಸಿಕ ನೆಮ್ಮದಿಯಿತ್ತು. ಹೈವೇನಲ್ಲಿ ಟ್ರಾಫಿಕ್ ಇರೊಲ್ಲ. ಅರಾಮಾಗಿ 100+ ಕಿ.ಮಿ ಸ್ಪಿಡಿನಲ್ಲಿ ಬರಬಹುದು. ಇದೇ ನಮ್ಮ ದಿನಚರಿಯಾಗಿತ್ತು.

ಕೊಡೈಕೆನಾಲ್ ಗೆ ಹೊರಡೋ ತಯಾರಿಗೆ ಗುರುವಾರ ಬೇಗ ಹೊರಟಿದ್ದೆ. ಅಂದು ರವಿ, ಪ್ರಶಾಂತ್, ಕಲಾ ಬರಲಿಲ್ಲ. ಪಾವನ ಬಂದಿದ್ಲು. ಆಫೀಸನ್ನು 6:20ಕ್ಕೆ ಬಿಟ್ಟು ಮೈಸೂರು ರೋಡು ಸೇರಿದಾಗ 7:10 ಆಗಿತ್ತು. ಕೆಂಗೇರಿ ಹತ್ರ ಮುಂದಿದ್ದ ದೊಡ್ಡ ಲಾರಿ ನನ್ನ ಪ್ರೀತಿಯ ಕಾರಿಗೆ ಡಿಕ್ಕಿ ಹೊಡದೇ ಬಿಟ್ಟ. ನನ್ನ ಪಕ್ಕದ ಡೋರು ಜ್ಯಾಮೇಜ್ ಆಗಿತ್ತು. ಕಾರಿನ ಬಲಬಾಗದ ಟೈರಿನ ಮೇಲ್ಬಾಗ ಕಿತ್ತು ಹೋಗಿತ್ತು. ಲೈಟ್ ಕಿತ್ತು ಹೋಗಿತ್ತು.
ಆತ ಬರೀ ಕಾರಿಗೆ ಮಾತ್ರ ಡ್ಯಾಮೇಜ್ ಮಾಡಿರಲಿಲ್ಲ. ನನ್ನ ಹೃದಯಕ್ಕೆ ಮಾಡಿದ್ದ. ಕಾರಿಗೆ ಒಂದು ಸಣ್ಣ ಸ್ಕ್ರಾಚ್ ಆದ್ರೂ ಬೇಸರ ಮಾಡ್ಕೋತ್ತಾಯಿದ್ದ ನನಗೆ ಮನಸ್ಸಲ್ಲಿ ಅಳಿಯದ ಹಾಗೆ ದೊಡ್ದದಾದ ಗಾಯವಾಗಿತ್ತು. ತಕ್ಷಣ ಭಾಸ್ಕರ ಮಾವನಿಗೆ ಫೋನಾಯಿಸಿದೆ. ಮಾವನ ಫ್ರೆಂಡ್ಸ್ 6-7 ಜನ ವ್ಯಾನ್ ನಲ್ಲಿ ಬರ್ತಾರೆ ಅಂತ ಗೊತ್ತಾಯ್ತು. ನಂತ್ರ ಮಠಕ್ಕೆ ಫೋನಾಯಿಸಿದೆ. ಕ್ಷಣಾರ್ದದಲ್ಲಿ ವಿಷಯ ಗುರುಗಳಿಗೂ ತಲುಪಿತು. ನಿನಗೇನಾದ್ರು ಆಗಿದೆಯಾ ಅಂತ ಬಹಳ ಕರೆಗಳು ಬರಲು ಪ್ರಾರಂಭವಾಯ್ತು. ನನಗೆ ಎನೂ ಆಗಿರಲಿಲ್ಲ. ಮಾವನ ಫ್ರೆಂಡಂತೂ ನಾನು ರೌಡಿಗಳನ್ನು ಕರ್ಕೊಂಡು ಬರ್ತೀನಿ. ಅವ್ರು ನಿನಗೇನಾದ್ರು ಮಾಡಿದ್ರಾ ಅಂತ ಕೇಳ್ದ. ಮೊದಲು ಸ್ವಲ್ಪ ಹಾರಾಡಿದ ಲಾರಿ ಡ್ರೈವರ್ ಅವರು ಬಂದ ತಕ್ಷಣ ಸೈಲೆಂಟ್ ಆದ. ಇದಾದ ನಂತರ ಮಠದಿಂದ ಗಣಪತಿ ಚಿಕ್ಕಯ್ಯ ಮತ್ತು ಮಠದ ಕೆಲವರು ಬಂದ್ರು. ಗಣಪತಿ ಚಿಕ್ಕಯ್ಯ ಮಠದ ಸಮವಸ್ತ್ರದಲ್ಲಿದ್ದ. ಡೈವರ್ ಅವನನ್ನು ಸ್ವಾಮಿ ಎಂದು ಕರೆಯೋಕೆ ಪ್ರಾರಂಭಮಾಡಿದ. ಕೊನೆಗೆ ಮರುದಿನ ಅವರೆಲ್ಲ ಮಾರುತಿ ಶೋ ರೂಮ್ ಗೆ ಬರೋದು ಅಂತ ತಿರ್ಮಾನವಾಯ್ತು.


ಬೆಳಗ್ಗೆ ಅಲ್ಲಿ ಹೋಗಿ ಕಾದ್ರೆ ಅವ್ರು ನಾಪತ್ತೆ. ಸರಿ ಮಾಡೋಕೆ ಎಷ್ಟಾಗತ್ತೆ ಅಂತ ಕೇಳಿದ್ರೆ ಬರೋಬ್ಬರಿ 20000 ಬೇಕು ಅಂದ್ರು.ಕೊನೆಗೆ ಲಾರಿಯ ವಾನರ(ಓನರ್)ಹುಡ್ಕೊಂಡು ಹೋದಾಗ ಗೊತ್ತಾಗಿದ್ದು ಅದು ಬೇರೆಯವರ ಲಾರಿಯೆಂದು. ಮರುದಿನ ಬನ್ನಿ ಅಂತ ಹೇಳಿದ್ರು. ನನಗೆ ಕೊಡೈಕೆನಾಲ್ ಹೋಗಬೇಕಾಗಿದ್ರಿಂದ ಕಾರನ್ನು ಮಾವನ ಕೈಲಿ ಕೊಟ್ ಹೋದೆ. ಇಂದು ಬಂದಾಗ ಮಾವ ಹೇಳಿದ್ರು ಅವ್ರು 5 ಸಾವಿರ ಕೊಟ್ರು. ಇನ್ನು ಇನ್ಯೂರೆನ್ಸ್ ಅಥವಾ ಬೇರೇ ಗ್ಯಾರೇಜಿಗೆ ಕೊಡೋದಾ ಅಂತ ನೋಡ್ಬೇಕು.

ಇವತ್ತು ಅದೇ ಕಾರನ್ನು ತಗೊಂಡು ಆಫೀಸಿಗೆ ಬಂದೆ. ಕಾರನ್ನು ನೋಡಿದಾಗ ಒಮ್ಮೆ ಬೇಸರವಾಗತ್ತೆ.

1 comment:

Sushrutha Dodderi said...

ವಸುಧೇಂದ್ರರ 'ಪ್ರತಿ ಕಾರಿಗೂ ಒಂದು ನೆಗ್ಗು' ಬರಹ ನೆನಪಾಯ್ತು. :-)