Sunday, September 9, 2007

ಕೊಡೈಕೆನಾಲ್ ಪ್ರವಾಸ

ಬದುಕಿನ ಜಂಜಾಟದಿಂದ ಬೇಸತ್ತಿದ್ದ ಮನಕ್ಕೆ ತಂಪೆರೆಯಬೇಕೆಂಬ ಹಂಬಲದಿಂದ ನಾನು ಜಯಶ್ರೀ ಬಹಳದಿನಗಳಿಂದ ಎಲ್ಲಾದರು ಹೊರಗೆ ಹೋಗಬೇಕೆಂದು ಪ್ಲಾನ್ ಮಾಡ್ತಾಬಂದು ಕೊನೆಗೆ ಅದಕ್ಕೆ ಮುಹೂರ್ತವಿಟ್ಟು ಆಗಸ್ಟ್ 31 ರಂದು ಕೊಡೈಕೆನಾಲ್ ಗೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಆಗಸ್ಟ್ 31 ರ ರಾತ್ರಿ ಬಸ್ಸಿನಲ್ಲಿ ಹೊರಟ ನಮ್ಮ ಪ್ರಯಾಣ ಕೊಡೈ ತಲುಪಿದ್ದು ಮರುದಿನ ಬೆಳೆಗ್ಗೆ 10:30ಕ್ಕೆ. ಮೊದಲೇ ಕಾಟೇಜ್ ಬುಕ್ ಮಾಡಿದ್ದರಿಂದ, ಅವರು ಕಾರ್ ನಲ್ಲಿ ನಮ್ಮನ್ನು ಕಾಟೇಜಿಗೇ ಕರ್ಕೊಂಡು ಹೋದ್ರು. "ಸ್ವಜ" ಇದು ಕಾಟೇಜ್ ಹೆಸ್ರು, ಕೊಡೈಕೆನಾಲ್ ನಿಂ 6 ಕಿ.ಮಿ ದೂರದಲ್ಲಿದೆ. ಒಮ್ಮೆ ಅಲ್ಲಿಂದ ಸಿಟಿಗೆ ಹೋಗಲು Rs. 150 ಚಾರ್ಜ್ ಕೊಡಬೇಕು. ಕಾಟೇಜ್ ಬಹಳ ಚೆನ್ನಾಗಿದೆ. ಕಾಡಿನ ಮದ್ಯೆ ಕಾಟೇಜ್ . ಅಕ್ಕಪಕ್ಕ ಯಾರೂ ಇಲ್ಲ. ಎದುರಿಗೆ ಸುಂದರ ಕೊಡೈ ಗುಡ್ಡಗಳು, ಅದನ್ನು ಬಾಚಿತಬ್ಬಿದ ಮಂಜು, ಅಲ್ಲಿ ಇಲ್ಲಿ ಒಮ್ಮೋಮ್ಮೆಮಂಜನ್ನು ಸರಿಸಿ ನಮಗೆ ದರ್ಶನವೀಯುವ ರಮಣೀಯ ದೃಶ್ಯಗಳು ನಮ್ಮ ಕಣ್ ತಣಿಸಿದವು. ಕಾಟೇಜಿನ ಒಳಗೆ/ಹೊರಗೆ ಇದ್ದ ಸಣ್ಣ ಸಣ್ಣ ಕ್ಯಾಕ್ಟಸ್ ಗಿಡಗಳು ಸೌಂದರ್ಯಕ್ಕೆ ಮೆರಗನ್ನು ನೀಡಿದ್ದವು.


ಮದ್ಯಾನದ ತನಕ ಅಲ್ಲೇ ಇದ್ದು ದಣಿವಾರಿಸಿಕೊಂಡ ಊಟ ಮಾಡಿ ಕೊಡೈ ಲೇಕ್ ನತ್ತ ನಮ್ಮ ಪ್ರಯಾಣ ಮುಂದುವರೆಯಿತು. ಅಲ್ಲಿ ಬೋಟಿನಲ್ಲಿ ಇಡೀ ಕೊಡೈ ಸರೋವರವನ್ನು ಸುತ್ತು ಹೊಡೆದಿದ್ದು ಆಯ್ತು. ಬೋಟಿನ ಡ್ರೈವರ್ ನಮ್ಮನ್ನು ಫಿಲ್ಮಿನಲ್ಲಿ ತೋರಿಸೋ ಹಾಗೆ ನಿಲ್ಲಿಸಿ ಫೋಟೋಗಳನ್ನು ತೆಗೆದ. ದಡದ ಹತ್ತಿರ ನಿಲ್ಲಿಸಿದ್ದ ಬೋಟನ್ನು ನಾನು ಡ್ರೈವ್ ಮಾಡುತ್ತಿದ್ದ ಫೋಟೋವು ಅದರರಲ್ಲಿ ಇತ್ತು. ಕೊಡೈಲೇಕ್ ನೋಡಿದ ನಂತರ ನಾವು ಹೋಗಿದ್ದು ಬ್ರ್ಯಾಂಟ್ ಪಾರ್ಕಿಗೆ. ಅಲ್ಲಿದ್ದ ಸುಂದರಪುಷ್ಪಗಳನ್ನು ನೋಡಿ ಒಮ್ಮೆ ಲೇಕ್ ನ ಸುತ್ತು ಹಾಕೋಣ ಅಂತ ಪಾದಯಾತ್ರೆ ಶುರುಮಾಡಿದ್ವಿ. ಎಷ್ಟು ದೂರ ಹೋದ್ರು ಅಲ್ಲಿ ಮತ್ತೆ ತಿರುವು ಮತ್ತೆ ನಡೆಯೋದು. ಸುಮಾರು 3 ಕಿ.ಮಿ ನಡೆದು ಜಯಶ್ರೀ ಹತ್ರ ಬೈಸ್ಕೊಂಡು ಟ್ಯಾಕ್ಸಿಗೆ ಫೋನಾಯಿಸಿದೆ. ಮತ್ತೆ ಕಾಟೇಜ್ ತಲುಪಿದ್ದು ಸಂಜೆ 6ಕ್ಕೆ. ಕಾಟೇಜಿನಲ್ಲಿ ಬರಿಗಾಲಲ್ಲಿ ಒಡಾಡೋಕೆ ಆಗ್ತಾಯಿರಲಿಲ್ಲ. ಅಷ್ಟು ತಣ್ಣಗಿತ್ತು. ಅಲ್ಲೇ ಇದ್ದ ಫೈರ್ ಡ್ರಮ್ಮಿಗೆ ಕಟ್ಟಿಗೆ ಹಾಕಿ ಬೆಂಕಿ ಹಚಿ ಹತ್ತು ನಿಮಿಷದಲ್ಲಿ ಇಡೀ ರೂಮು ಬೆಚ್ಚ್ಗಾಗಿದ್ದು.

ಮರುದಿನ ಒಂದು ಟ್ಯಾಕ್ಸಿಯನ್ನು ತಗೊಂಡು ಕೊಡೈಕೆನಾಲ್ ಸುತ್ತಿದ್ವಿ. ನೋಡಿದ ಸ್ಥಳಗಳು Coakers Walk, Pillar rock, Suicide point, Pine forest, Shanti view, Upperlake view, bryant park etc

ಒಂದು ದಿನದ ಇಂಡಿಕಾ ಬಾಡಿಗೆ 700+150 (ಸಿಟಿಯಿಂದ ನಾವಿದ್ದ ಸ್ಥಳಕ್ಕೆ ಬಾಡಿಗೆ). ಸಂಜೆ ಕೊಡೈನಲ್ಲಿ ಮಳೆ, ಕಾಟೇಜಿನಲ್ಲಿ ಕುಳಿತು ಮಳೆಯಲ್ಲಿ ತೊಯ್ಯುತ್ತಿದ್ದ ಕೊಡೈ ಬಹಳ ಸುಂದರವಾಗಿ ಕಾಣ್ತಾಯಿತ್ತು. ಕಿಟಕಿಯ ಪಕ್ಕ ನಿಂತು ನೋಡುತ್ತಿದಾಗ ನೆನಪಾಗಿದ್ದು ಬಾಲ್ಯದಲ್ಲಿ ಜಗಲಿಯಲ್ಲಿ ಕುಳಿತು ಮಳೆಯನ್ನು ನೋಡುತ್ತಿದ್ದ ದೃಶ್ಯ. ಮಳೆಗಾಲದಲ್ಲಿ ಉರಿಗೆ ಹೋಗದೆ ಏಷ್ಟೋ ವರ್ಷಗಳಾಯಿತು. ಅಲ್ಲಿ ಹೋಗಿ ಸಣ್ಣವನಿದ್ದಾಗ ತೊಯ್ಯುತ್ತಿದ್ದ ಹಾಗೆ/ಆಡುತ್ತಿದ್ದ ಹಾಗೆ ಮಾಡಬೇಕಿನಿಸುತ್ತಿದ್ದೆ.
ಮರುದಿನ ಕೊಡೈನಿಂದ ೪೦ ಕಿ.ಮಿ ದೂರದಲ್ಲಿರುವ Mannavanur Lake ಗೆ ಹೋಗಿ ಸಂಜೆ ವಾಪಾಸಾದೆವು. ಇಂಡಿಕಾ ಬಾಡಿಗೆ 1100. ಬರುವಾಗ ಕೊಡೈನಲ್ಲಿ ಹೆಸರುವಾಸಿಯಾದ ಚಾಕ್ಲೇಟುಗಳನ್ನು ಖರಿದಿಸಿ ಕಾಟೇಜಿಗೆ ಹೋಗಿ ಬಿಲ್ಲ್ ಸೆಟ್ಟಲ್ ಮಾಡಿ ಮತ್ತೆ ಕ.ರಾ.ರ.ಸಂ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದೆವು.

ಕಾಟೇಜಿನಲ್ಲಿ ನಾವಿದ್ದಿದ್ದು 2 ರಾತ್ರಿ+ 3 ಹಗಲು.
ಕಾಟೇಜಿನ ಬಿಲ್ಲ್ 6000+400 (ಊಟಕ್ಕೆ ೧೦೦)
ಟ್ಯಾಕ್ಸಿ 850+1100 ಎಲ್ಲ ಸೇರಿ 10K ಬೇಕು.

ನಿಮಗೆ ಆಸಕ್ತಿಯಿದ್ದರೆ "ಸ್ವಜ" ಸಂಪರ್ಕಿಸಬಹುದು.

No comments: