Sunday, August 26, 2007

ಬಾಲ್ಯದಲ್ಲಿ ಇದ್ದ ಪಾಠ

ಬಾಲ್ಯದಲ್ಲಿ ಇದ್ದ ಪಾಠ...

ನೀವು ಕನ್ನಡ ಮಾಧ್ಯಮದಲ್ಲಿ ಓದಿದ್ರೆ, ಒಮ್ಮೆ ನಿಮಗೆ ಶಾಲೆಯ ನೆನಪಾಗಬಹುದು.

ಒಂದು ಎರಡು ಬಾಳೆಲಿ ಹರಡು,
ಮೂರು ನಾಲ್ಕು ಅನ್ನ ಹಾಕು,
ಐದು ಆರು ಬೇಳೆ ಸಾರು,
ಏಳು ಎಂಟು ಪಲ್ಯಕೆ ದಂಟು,
ಒಂಬತ್ತು ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು.

~~~~~~~~~~~~~~~~~~~~~~~~~

ಈತ ಈಶ, ಈತ ಗಣಪ.
ಈಶನ ಮಗ ಗಣಪ

ಗ ಣ ಪ
~~~~~~~~~~~~~~~~~~~~~~~~~

ಈಗ ಊಟದ ಸಮಯ
ಕನಕ ನೀನು ಬಾ
ಕಮಲ ನೀನು ಬಾ

ಕನಕಳ ಲಂಗ ಜಳ ಜಳ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ವಯಸ್ಸಾದ ಕಾರಣ (ದೇಹಕ್ಕೆ ಆದುದ್ದದ್ದಲ್ಲ. ಮನಸ್ಸಿಗೆ ವಯಸ್ಸಾಗಿದ್ದು) ಮರೆತು ಹೋಗಿದೆ. ತಪ್ಪಿದ್ದಲ್ಲಿ ತಿದ್ದಿ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಗೆಳೆಯ ಸುಶ್ರುತ ದೊಡ್ಡೇರಿ ಹೇಳಿದ್ದು

ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲಲು ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಟ್ಟದ ಗಾಳಿಪಟ.....


ಮತ್ತೆ,

ನನ್ನಯ ಬುಗರಿ
ಬಣ್ಣದ ಬುಗರಿ
ಗಿರಿಗಿರಿ ಸದ್ದನು ಮಾಡುವ ಬುಗರಿ.....

......ಕಾಮನಬಿಲ್ಲನು ಭೂಮಿಗೆ ಇಳಿಸಿ
ಗರಗರ ಸುತ್ತುವ ನನ್ನಯ ಬಗರಿ...

ಮುಂದೆ, ಮಧ್ಯೆ ಮಧ್ಯೆ ಮರ್ತ್ ಹೋಗಿದೆ.. :(

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಶ್ಯಾಮಾ ಹೇಳಿದ್ದು

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯನೆಂತು ಪೇಳ್ವೆನೊ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯಾಳು ತಾನಿದ್ದನು

ಪುಣ್ಯ ಕೋಟಿ ಎಂಬ ಹಸುವು
ತನ್ನ ಕಂದನ ನೆನೆದು ಕೊಂಡು
ಮುನ್ನ ಹಾಲನು ಕೊಡುವೆನೆನುತಾ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯಾಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೆ ನಮ್ಮ ತಾಯಿ ತಂದೆ
ಸತ್ಯವೆ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದ ಭಾಷೆಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಕೊಟ್ಟ ಭಾಷೆಯ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತಾ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯಾಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ವೊದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತಕೇಳಿ
ಕಣ್ಣನೀರನು ಸುರಿಸಿ ನೊಂದೂ
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನೂ

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನಾ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರಭ ಹೇಳಿದ್ದು

ಆಮೆಯೊಂದು ಮರದ ಕೆಳಗೆ ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು ಎಂದು ಬಯಸಿತು

ಹಕ್ಕಿ ಜೊತೆಗೆ ಸಂಗ ಮಾಡಿ ಆಸೆ ತಿಳಿಸಿತು
ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು

ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ ಹಾರಿ ಹೋದವು
.... ಆಮೆ ನೋಡಿ ಜನರು ನಕ್ಕರು
ನಕ್ಕ ಜನರ ಬೈಯಲೆಂದು ಆಮೆ ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋಯಿತು

~~~~~~~~~~~~~~~~
ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು
ನಾಲ್ಕು ಮರಿಗಳ ಸೇರಿಸಿ

ಐದು ಜನರು ಬೇಟೆಗಾರರು
ಆರು ಬಲೆಗಳ ಎಳೆದು ತಂದು
ಏಳು ಕರಡಿಗಳಿಡಿಯಲೆಂದು
ಎಂಟು ಎಂದರು ಹರುಷದೀ

ಒಂಬತ್ತು ಎಂದನು ಅವರಲೊಬ್ಬ
ಹತ್ತು ಎಂದನು ಬೇರೆಯವನು
ಎಣಿಸಿ ನೋಡಿದರೇಳೇ ಏಳು
ಇಲ್ಲಿಗೀ ಕತೆ ಮುಗಿಯಿತು

11 comments:

Sushrutha Dodderi said...

ಹ್ಮ್.. ಹಂಗೇ,

ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲಲು ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಟ್ಟದ ಗಾಳಿಪಟ.....


ಮತ್ತೆ,

ನನ್ನಯ ಬುಗರಿ
ಬಣ್ಣದ ಬುಗರಿ
ಗಿರಿಗಿರಿ ಸದ್ದನು ಮಾಡುವ ಬುಗರಿ.....

......ಕಾಮನಬಿಲ್ಲನು ಭೂಮಿಗೆ ಇಳಿಸಿ
ಗರಗರ ಸುತ್ತುವ ನನ್ನಯ ಬಗರಿ...

ಮುಂದೆ, ಮಧ್ಯೆ ಮಧ್ಯೆ ಮರ್ತ್ ಹೋಗಿದೆ.. :(

ಶ್ಯಾಮಾ said...

ನಂಗೆ ಎಲ್ಲ ನೆನಪಾದಂಗೆ ಎಲ್ಲ ಮರ್ತ್ ಹೋದಂಗೆ ಆಗ್ತಾ ಇದ್ದು... :)
ಒಂದು ಸಲ ಹೇಳಿ ನೋಡ್ಕ್ಯತ್ತಿ :)

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯನೆಂತು ಪೇಳ್ವೆನೊ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯಾಳು ತಾನಿದ್ದನು

ಪುಣ್ಯ ಕೋಟಿ ಎಂಬ ಹಸುವು
ತನ್ನ ಕಂದನ ನೆನೆದು ಕೊಂಡು
ಮುನ್ನ ಹಾಲನು ಕೊಡುವೆನೆನುತಾ
ಚೆನ್ದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯಾಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೆ ನಮ್ಮ ತಾಯಿ ತಂದೆ
ಸತ್ಯವೆ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದ ಭಾಷೆಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಕೊಟ್ಟ ಭಾಷೆಯ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತಾ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯಾಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ವೊದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತಕೇಳಿ
ಕಣ್ಣನೀರನು ಸುರಿಸಿ ನೊಂದೂ
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನೂ

ಎನ್ನ ಒದಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನಾ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಇದು ನಂಗೆ ಸುಮಾರು ನೆನಪಿದ್ದು. :)

ಇನ್ನೊಂದೆರಡು ಒಂದೆರೆದೇ ಸಾಲು ನೆನಪಾಗ್ತಾ ಇದ್ದು.. ಯಾರಿಗಾದ್ರೂ ಗೊತ್ತಿದ್ರೆ ಹೇಳಿ

ನನ್ನ ನವಿಲೆ ನನ್ನ ನವಿಲೆ
ಬಾರೆ ಇಲ್ಲಿಗೆ
ಅಂಕು ಡೊಂಕು ಹೆಜ್ಜೆ ಹಾಕಿ
ಹೊರಟೆ ಎಲ್ಲಿಗೆ? ....
...................

ಇನ್ನೊಂದು

ಗಂಟೆಯ ನೆಂಟ ನೇ
ಓ ಗಡಿಯಾರ
........
..................
ಟಿಕ್ ಟಿಕ್ ಗೆಳೆಯ
ಟಿಕ್ ಟಿಕ್ ಟಿಕ್

ಮತ್ತೆ ಎಷ್ಟೊಂದು ಅರ್ಧ ಅರ್ಧ ಅಷ್ಟೇ... ಒಂದೊಂದು ಸಾಲಷ್ಟೇ ನೆನಪಿದೆ :(

ಯಜ್ಞೇಶ್ (yajnesh) said...

ಶ್ಯಾಮ,

ಇದನ್ನ ಪೂರ್ತಿ ಓದದೇ ಎಷ್ಟ ದಿನ ಆಗಿತ್ತು. ತುಂಬಾ ಥ್ಯಾಂಕ್ಸ್

"ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು
"
ಇಲ್ಲಿ ಸ್ವಲ್ಪ ಚೈಂಜ್ ಇದೆ ಅನ್ಸತ್ತೆ.
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು
"

ನಂಗೂ ಸರಿಯಾಗಿ ನೆನಪಿಲ್ಲ. ಯಾರಿಗಾದ್ರು ಗೊತ್ತಿದ್ರೆ ತಪ್ಪನ್ನು ತಿದ್ದಿ :)

ಯಜ್ಞೇಶ್ (yajnesh) said...

ಉದ್ಭವ.ಕಾಮ್ ನಲ್ಲಿ ಸಿಕ್ಕಿದ್ದು ಹೀಗಿದೆ

ಚೆಕ್ ಮಾಡಿ

Anonymous said...

ಆಮೆಯೊಂದು ಮರದ ಕೆಳಗೆ ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು ಎಂದು ಬಯಸಿತು

ಹಕ್ಕಿ ಜೊತೆಗೆ ಸಂಗ ಮಾಡಿ ಆಸೆ ತಿಳಿಸಿತು
ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು

ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ ಹಾರಿ ಹೋದವು
.... ಆಮೆ ನೋಡಿ ಜನರು ನಕ್ಕರು
ನಕ್ಕ ಜನರ ಬೈಯಲೆಂದು ಆಮೆ ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋಯಿತು
- Prabha

Anonymous said...

ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು
ನಾಲ್ಕು ಮರಿಗಳ ಸೇರಿಸಿ

ಐದು ಜನರು ಬೇಟೆಗಾರರು
ಆರು ಬಲೆಗಳ ಎಳೆದು ತಂದು
ಏಳು ಕರಡಿಗಲಿಡಿಯಲೆಂದು
ಎಂಟು .............

ಒಂಬತ್ತು ಎಂದನು ಅವರಲೊಬ್ಬ
ಹತ್ತು ಎಂದನು ಬೇರೆಯವನು
ಎಣಿಸಿ ನೋಡಿದರೇಳೇ ಏಳು
ಇಲ್ಲಿಗೀಕತೆ ಮುಗಿಯಿತು

ಯಜ್ಞೇಶ್ (yajnesh) said...

ಥ್ಯಾಂಕ್ಸ ಪ್ರಭ,

ಇವನ್ನು ಓದ್ತಾಯಿದ್ರೆ ಬಾಲ್ಯದ ನೆನಪು ಮತ್ತೆ ಮತ್ತೆ ಕಾಡತ್ತೆ

Ranju said...

ತುಂಬಾ ಥ್ಯಾಂಕ್ಸ್ ಯಜ್ಞೇಶ್,
ಹಳೆ ಪದ್ಯಗಳನ್ನೆಲ್ಲ ನೆನಪು ಮಾಡಿ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್.

@ಎನಾನಿಮಸ್
ಥ್ಯಾಂಕ್ಸ್. ನಾನು "ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ ಮೂರು ಕರಡಿಗಳಾಡುತಿದ್ದವು
ನಾಲ್ಕು ಮರಿಗಳ ಸೇರಿಸಿ" ಇದನ್ನ ತುಂಬಾ ದಿನದಿಂದ ನೆನಪು ಮಾಡಕೆ ಟ್ರೈ ಮಾಡಿ ಮಾಡಿ ಇಟ್ಟೆ ನೆನಪೆ ಆಗಿರಲಿಲ್ಲ. ಈಗ ನೆನಪಾಯಿತು. ಥ್ಯಾಂಕ್ಸ್.

Sushrutha Dodderi said...

ಗೋವಿನ ಹಾಡಿನಲ್ಲಿ ಇದೊಂದು ಪ್ಯಾರ ಬಿಟ್ಟು ಹೋಯ್ದು ಅನ್ಸ್ತು:

ಸಿಡಿದು ರೋಷದಿ ಮೊರೆಯುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ತುಡುಕಲೆರಗಿದ ರಭಸಕಂಜಿ
ಚದುರಿ ಹೋದವು ಶಿಖೆಗಳು

ಯಜ್ಞೇಶ್ (yajnesh) said...

ಸುಶ್ರುತ,

ಅದನ್ನ ಎಲ್ಲಿ ಸೇರ್ಸಕು?

ಶ್ಯಾಮಾ said...

ಅದು ಹೆಚ್ಚಾಗಿ
" ಹಬ್ಬಿದಾಮಲೆ ಮಧ್ಯದೊಳಗೆ " ಪ್ಯಾರಾ ಆದ ಮೇಲೆ ಅನ್ಸ್ತು
ಇನ್ನು ಒಂದೆರಡು ಪ್ಯಾರಾ ಬಿಟ್ಟು ಹೋಯ್ದೇನಾ ಅನ್ಸ್ತಾ ಇದ್ದು