ನಿನ್ನೆ ಒಂದು ಪುಸ್ತಕ ಓದ್ತಾಯಿದ್ದೆ. ಅದರಲ್ಲಿ ಹುಚ್ಚಿನ ಬಗ್ಗೆ ಒಂದು ಲೇಖನ ಬಂದಿತ್ತು. ಅದರ ಸಾರವನ್ನು ತೆಗೆದುಕೊಂಡು ಅದಕ್ಕೆ ಕೈ, ಕಾಲುಗಳನ್ನು ಸೇರಿಸಿ ಬರಿಯೋಣ ಅಂತ ಇದೀನಿ.
ಏನಿದು ಹುಚ್ಚು????
ವೈದ್ಯಶಾಸ್ತ್ರದ ಪ್ರಕಾರ "ಮನೋರೋಗ".
ಏ ಅವನಿಗೆ ಹುಚ್ಚು ಹಿಡಿದಿದೆ ಅನ್ಸತ್ತೆ ಅಂದರೆ ಅವನನ್ನು ನಿಮ್ಯಾನ್ಸ್ ಅಥವಾ ಕಂಕನಾಡಿಗೆ ಸೇರಿಸ್ಬೇಕೇನೋ ಅನ್ನೋರು, ಏನಾದ್ರು ಎಡವಟ್ಟು ಮಾತಾಡಿದ್ರೆ ಹುಚ್ಚರ ರೀತಿ ಮಾತಾಡಬೇಡ ಅನ್ನೋರು, ಏನಾದರು ಜಾಸ್ತಿ ಯೋಚನೆ ಮಾಡ್ತಾಯಿದ್ದರೆ, ಇವಳಿಗೆ/ಇವನಿಗೆ ಏನೋ ಆಗಿದೆ, ಹೀಗೆ ಬಿಟ್ಟರೆ ಹುಚ್ಚು ಹಿಡಿಯೋ ಚಾನ್ಸ್ ಇರತ್ತೆ ಅನ್ನೋರು, ಅವನಿಗೆ ಹುಡುಗಿ ಕೈ ಕೊಟ್ಟಿದ್ದರಿಂದ ಹುಚ್ಚರ ತರ ವರ್ತಿಸಿತಾಯಿದಾನೆ ಅನ್ನೋ ಜನಗಳು ಇರ್ತಾರೆ.
ಇವೆಲ್ಲ ಮನೋರೋಗಕ್ಕೆ ಸಂಬಂದಪಟ್ಟಿರೋದು.
ಏಲ್ಲ ಪರಿದಿಯನ್ನು ದಾಟಿ, ಇತಿ ಮಿತಿಯನ್ನು ದಾಟಿದ ಅಂಟಿಗೂ ಹುಚ್ಚು ಎನ್ನುತ್ತಾರೆ. ಈ ಪ್ರಪಂಚದಲ್ಲಿ ಬಹಳ ರೀತಿಯ ಹುಚ್ಚರನ್ನೂ, ಹುಚ್ಚುತನಗಳನ್ನು ನಾವು ಕಾಣಬಹುದು.ಹಣದ ಅತಿಯಾಸೆ ಇರೋರು, ಜೀವನ ಪೂರ್ತಿ ಕಷ್ಟಗಳನ್ನೆಲ್ಲಾ ಅನುಭವಿಸಿಯಾದರೂ ಹಣ ಗಳಿಸಬೇಕು ಅಂತ ಇರ್ತಾರೆ. ಹೆಚ್ಚು ಹಣಗಳಿಸಬೇಕು ಅಂತ ಹಣದ ಹಿಂದೆ ಹೋಗೋರನ್ನು ನಾವು ಈಗ ಹೆಚ್ಚು ಕಾಣ್ತೇವೆ. ಅದು ಅತಿಯಾದರೆ ಅಡ್ಡಬಂದವರನ್ನು ಮುಗಿಸಿಯಾದರೂ ಹಣ ಗಳಿಸಬೇಕು ಅನ್ನೋದು ಅವರ ಉದ್ದೇಶವಾಗಿರತ್ತೆ. ಅಂತವರಿಗೆ ಏಷ್ಟು ಸಂಬಳ ಬಂದರೂ ತೃಪ್ತಿಯಿರೋದಿಲ್ಲ. ಅವನಿಗೆ ನನಗಿಂತ ಜಾಸ್ತಿ ಬರತ್ತೆ. ನಾನು ಅವನಷ್ಟು ಸಂಬಳ ಪಡೀಬೇಕು ಅಂತ ವಾಮಮಾರ್ಗನ್ನಾದರು ಬಳಸಿ ಹಣದ ಹಿಂದೆ ಓಡ ಹುಚ್ಚರನ್ನು ನಾವು ಕಾಣ್ತೇವೆ.
ಇನ್ನು ಕೆಲವರು ಇರ್ತಾರೆ, ಒಬ್ಬರನ್ನೊಬ್ಬರು ಪ್ರೀತಿಸಿ, ಅವರನ್ನು ಪಡೆಯಲು ತಮ್ಮನ್ನು ಹೆತ್ತು, ಹೊತ್ತು ಬೆಳಿಸಿದ ತಂದೆ ತಾಯಿಗಳನ್ನು ಬಿಟ್ಟಾದರು ಸರಿ, ಅವಳನ್ನು/ಅವನ್ನನ್ನು ಪಡೆಯಲೇ ಬೇಕು ಅನ್ನುವ ಹುಚ್ಚುತನವನ್ನು ನಾವು ಕಾಣ್ತೇವೆ. ಆಗ ಅವರಿಗೆ ಯಾರ ತಿಳುವಳಿಕೆ, ಬುದ್ದಿಮಾತುಗಳು ಅವರಿಗೆ ರುಚಿಸೋಲ್ಲ. ತಮ್ಮ ಗುರಿ ಅವಳನ್ನು/ಅವನನ್ನು ಪಡೆಯೋದು ಅಂತ ಇರತ್ತೆ. ಕೊನೆಗೆ ಒಬ್ಬರನ್ನೊಬ್ಬರು ಸಿಗದೇ ಇದ್ದರೆ, ಜೀವವನ್ನಾದರು ಕಳೆದುಕೊಂಡು ಬಿಡಬೇಕೆನ್ನುವ ಹುಚ್ಚತನವದು.
ತಾನು ದೊಡ್ದ ಮನುಷ್ಯನಾಗಬೇಕು ಅನ್ನೋ ಹುಚ್ಚು ಇರೋರಿಗೆ, ಇತರರನ್ನು ತುಳಿದರೂ ಪರವಾಗಿಲ್ಲ, ತಮ್ಮ ಕೀರ್ತಿ ಹೆಚ್ಚಾಗಬೇಕು ಅನ್ನೋದಿರತ್ತೆ. ಇನ್ನು ಕೆಲವರಿಗೆ ರಾಜಕೀಯದ ಹುಚ್ಚು. ಕೆಲವರಿಗೆ ಸಿನಿಮಾದ ಹುಚ್ಚು. ಸಿನಿಮಾ ನಟಿ/ನಟನ ಹುಚ್ಚು.ಕೆಲ ಲಫಂಗರಿಗೆ ಹುಡುಗಿಯರ ಹುಚ್ಚು. ತಮ್ಮ ಬ್ಲಾಗನ್ನು ಹೆಚ್ಚು ಜನ ನೋಡಬೇಕು, ಕಮೆಂಟ್ಸ್ ಮಾಡಬೇಕು ಅನ್ನೋ ಹುಚ್ಚು. ಯಾರು ಕಮೆಂಟ್ಸ್ ಮಾಡದೇ ಇದ್ದರೆ ತಾವೆ Anonymous ನಿಂದ ಮಾಡೋ ಹುಚ್ಚು. ಇದು ಹುಚ್ಚತನಕೆ ಸೇರ್ಪಡೇಯಾದ ಹೊಸ ಹುಚ್ಚು. ಹುಚ್ಚಿನ ಬಗ್ಗೆ ಬರೆಯುತ್ತಾ ಹೋದರೆ ಹನುಮಂತನ ಬಾಲದ ತರ ಆಗಬಹುದು.
ಯಾವುದೋ ಫಿಲ್ಮ್ ನಲ್ಲಿ ಕೇಳಿದ ಹಾಡು ನೆನಪಾಗ್ತಾಯಿದೆ.
"ಹುಚ್ಚರ ಸಂತೆ, ಹುಚ್ಚರ ಸಂತೆ,
ಈ ಭೂಮಿ ಮೇಲೆ ಇರೋರೆಲ್ಲ ಹುಚ್ಚರು ಕಣೋ..."
ಒಟ್ಟಿನಲ್ಲಿ ಹುಚ್ಚಿನ ಬಗ್ಗೆ ಜಾಸ್ತಿ ಯೋಚನೆ ಮಾಡಿದರೆ ನಮಗೆ ಹುಚ್ಚ ಎನ್ನಬಹುದು.

ನಾಳಿನ ಭವಿಷ್ಯದ ಬಗ್ಗೆ ಯಾವಾಗಲು ಚಿಂತಿಸುತ್ತ, ಇರುವ ಪ್ರತಿಕ್ಷಣವನ್ನು ಅನುಭವಿಸಲಾರದವನು ಎಷ್ಟು ಶ್ರೀಮಂತನಾದರೇನು, ಏಷ್ಟು ಬುದ್ದಿವಂತನಾದರೇನು, ಅವನು ಹುಚ್ಚನೇ.
4 comments:
ಸತ್ಯವಾದ ಮಾತು ಯಜ್ಞೇಶಣ್ಣಾ..
ಆದರೆ ಇಂದು ಅಂಥಾ ಹುಚ್ಚು ಹತ್ತಿಸಿಕೊಂಡವರಿಗೇ ಬೆಲೆ ಜಾಸ್ತಿ ಇರೋದು, ಉಳಿದವರನ್ನ ವೇಸ್ಟ್ ಬಾಡಿಗಳ ತರ ನೋಡೋದು ವಾಸ್ತವ ಕಹಿ ಸತ್ಯ. :(
Chennagi moodibandide...
Huchchu yavagaloo adu relative term agiruththe annodu sathya...
Ninna website(VISHWA GOU) Chennagide...
Alilu seve antha thilkobeda...Namage esthu sadyavo asthu...
--
Vishwa
ಥ್ಯಾಂಕ್ಸ್ ವಿಕಾಸ್,
ಈಗಿನ ಕಾಲದಲ್ಲಿ ಮೊದಲು ಹೇಳಿದ ರೀತಿಯ(ಬ್ಲಾಗ್) ಹುಚ್ಚರ ಸಂಖ್ಯೆ ಜಾಸ್ತಿ ಇದ್ದಿದ್ರಿಂದ ಹುಚ್ಚು ಹತ್ತಿಸಿಕೊಂಡವರಿಗೇ ಬೆಲೆ ಜಾಸ್ತಿ ಇರೋದು.
ಥ್ಯಾಂಕ್ಸ್ ವಿಶ್ವ,
ಅದು ನನ್ನ ವೆಬ್ ಸೈಟ್ ಅಲ್ಲ. ಮಠದ್ದು. )
Post a Comment