Tuesday, March 27, 2007

ಏಷ್ಟು ವಿಸ್ಮಯ ಅಲ್ವಾ ಈ ಜಗತ್ತು !!!

ಏಂದಿನಂತೆ ತಿಂಡಿಗೆಂದು ಹೋಟೆಲ್ ಕಡೆ ಹೆಜ್ಜೆ ಹಾಕ್ತಾಯಿದ್ದೆ. ಹಾಗೆ ಹೋಗೋವಾಗ ಆತ ಕಾಣಿಸ್ತಾನಾ ಅಂತ ನೋಡಿದೆ. ಆತ ಅಲ್ಲಿ ಇರಲಿಲ್ಲ. ಓಂದು ವಾರದಿಂದ ಆತ ಅಲ್ಲಿ ಇರಲಿಲ್ಲ. ಅವನ ಬಗ್ಗೆ ಮರುಕವುಂಟಾಯ್ತು.ಆತ ಏಲ್ಲಿರಬಹುದು ? ಎನ್ ಮಾಡ್ತಾಯಿರಬಹುದು? ಅಂತ ಮನಸ್ಸಲ್ಲಿ ಗೊಂದಲವುಂಟಾಯ್ತು. ಪಕ್ಕದಲ್ಲಿದ್ದ ಗೆಳೆಯನ ಹತ್ರ ಕೇಳ್ದೆ ಆತ ಏಲ್ಲಿರಬಹುದು ಅಂತ. ಅದ್ಕೆ ಯಾಕೆ ಅವನ ಬಗ್ಗೆ ತಲೆ ಕೆಡಿಸ್ಕೋತೀಯಾ, ಸತ್ತು ಹೋಗಿರಬೇಕು ಅಂದ. ಯಾಕೋ ಬೇಜಾರಯ್ತು. ದಿನಾ ತಿಂಡಿ ತಿನ್ನೋವಾಗ ಆತ ಅಲ್ಲೇ ಹೋಟೆಲ್ ಪಕ್ಕ ಇರ್ತಾಯಿದ್ದ. ಅಲ್ಲಿಗೆ ಬರೋರ್ ಹತ್ರ ಬಿಕ್ಷೆ ಬೇಡಿ ಬಂದ ದುಡ್ದಿಂದ ಟೀ ಕುಡಿತಾಯಿದ್ದ. ಬಹುಶಃ ಅದೇ ಅವನ ತಿಂಡಿಯಿರಬಹುದು!

ಆದರೆ ಅವನ ಓಂದು ಗುಣ ನನಗೇ ಬಹಳ ಹಿಡಿಸ್ತು. ಆತ ಬಿಕ್ಷೆ ನೀಡದಿದ್ದರೆ ಏನೂ ಹೇಳದೇ ಸುಮ್ಮನೆ ಮುಂದೆ ಹೋಗ್ತಾಯಿದ್ದ. ಕೆಲವೊಮ್ಮೆ ಯಾರೋ ಅರ್ದ ಕುಡಿದುಬಿಟ್ಟ ಕಾಫಿ/ಟೀ ಕುಡಿತಾಯಿದ್ದ. ಚೀ!!! ಅಂತ ನಿಮಗನಿಸಿರಬಹುದು. ಆದರೆ ಅವನಿಗೆ ಏಂಜಲಿಗಿಂತ ಓಂದು ಹೊತ್ತಿನ ಆಹಾರ ಮುಖ್ಯ. ನಾವು ಹೋಟೆಲ್ ಗಳಿಗೆ ಹೋಗ್ತೇವೆ. ಏಷ್ಟೋ ಕಡೆ ಪಾತ್ರೆ ತೊಳೀಲಿಕ್ಕ ಇರೋದು ೨ ಬಕೇಟ್ಟುಗಳು. ಅದನ್ನೇ ನಾವು ಕ್ಲೀನ್ ಅಂತ ತಿಳಿದು ತಿನ್ನ್ತೇವೆ. ಆದರೆ ಅವನಿಗೆ ಅದು ಅನಿವಾರ್ಯ. "ಕಾಲಾಯ ತಸ್ಮೈ ನಮಃ" ಅಲ್ವಾ?....

ಏಷ್ಟೋ ಸಲ ಅವನ ಮಾತಾಡಿಸಬೇಕು, ನಿಂದು ಯಾವೂರು, ನಿನ್ನವರು ಯಾರು ಇಲ್ವಾ, ನೀನ್ಯಾಕೆ ಬಿಕ್ಷೆ ಬೇಡ್ತೀಯ ಅಂತ. ಆದರೆ ಆತ ಅಂಟಿಕೊಂಡರೆ ಕಷ್ಟ ಅಂತ ಭಯ. ಸುಮಾರು ೧ ವರ್ಷದಿಂದ ಆತನನ್ನು ಗಮನಿಸ್ತಾ ಇದ್ದೆ. ಇತ್ತೀಚೆಗೆ ಬಹಳ ಸೋತು ಹೋಗಿದ್ದ. ಮೊದಲಿದ್ದ ಉತ್ಸಾಹ ಇರಲಿಲ್ಲ. ಜೀವನದ ಸಂದ್ಯಾಕಾಲದಲ್ಲಿದ್ದ. ಕೋಲು ಹಿಡಿದು ನಡೆದಾಡ್ತಾ ಇದ್ದ. ಅಲ್ಲೇ ಹೋಟೆಲ್ ಪಕ್ಕ ಮಲಗ್ತಾ ಇದ್ದ. ಅದೇ ಅವನ ಅರಮನೆ. ಒಂದು ವಾರದ ಹಿಂದೆ ಆತ ಮಲಗಿದ್ದನ್ನು ನೋಡಿದ್ದೆ. ಈಗ ಇಲ್ಲ. ಅವನು ಮಲಗುತ್ತಿದ್ದ ಜಾಗದಲ್ಲಿ ಏನೂ ಇಲ್ಲ. ಬಹುಶಃ ಈ ಲೋಕ ಬಿಟ್ಟು ಹೋಗಿರಬೇಕು. ಅವನು ಹೋದಾಗ ಯಾರೂ ಅಳಲಿಲ್ಲ.

ಏಷ್ಟು ವಿಸ್ಮಯ ಅಲ್ವಾ ಈ ಜಗತ್ತು. ಇನ್ನೊಂದು ಕ್ಷಣದಲ್ಲಿ ಏನಾಗತ್ತೆ ಅಂತ ಅರಿವಿರುವುದಿಲ್ಲ. ಇಲ್ಲಿ ಯಾರಿಗೆ ಯಾರೂ ಇಲ್ಲ. ನಾಳೆ ನಮಗೆ ಆತನಿಗಾದ ಹಾಗೆ ಆಗಬಹುದು.

ಏನು ಜೀವನಾರ್ಥ? ಏನು ಪ್ರಪಂಚಾರ್ಥ?
ಏನು ಜೀವ ಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದು ಏನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ

6 comments:

Sushrutha Dodderi said...

ಭಿಕ್ಷುಕರನ್ನು ಅಲಕ್ಷಿಸುವ ಈ ಜಗದೆದುರಿಗೆ ನಿಮ್ಮಂತಹ ಭಾವಜೀವಿಗಳ ಮೌನದ ಮಾತುಗಳು ಕಾಡಮಳೆಯಾಗಿಬಿಡುತ್ತವೇನೋ.. ಅಂಥದ್ದೊಂದು ಕರುಣೆಯ ಕಣ್ಣು ಎಲ್ಲರಿಗೂ ಇರಬೇಕು ಅಲ್ವಾ?

ನಿನ್ನ ಬ್ಲಾಗಿನ ಹೆಸರಿಗೆ ಒಪ್ಪುವಂತಹ ಬರಹಗಳನ್ನೇ ಪೋಸ್ಟ್ ಮಾಡ್ತಾ ಇದೀಯಾ. ಕಂಟಿನ್ಯೂ!

ಯಜ್ಞೇಶ್ (yajnesh) said...

ಥ್ಯಾಂಕ್ಸ್ ಸುಶ್ರುತ,

ಆತನ ನಡತೆ ಏಲ್ಲ ಬಿಕ್ಷುಕರ ರೀತಿ ಇರಲಿಲ್ಲ. ಅದಕ್ಕೆ ನನಗೆ ಅವನ ಬಗ್ಗೆ ಕಾಳಜಿ ಬಂದಿದ್ದು. ಅವನು ಯಾಕೆ ಬಿಕ್ಷಾಟನೆಗೆ ಇಳಿದ, ಸಾಯುವಾಗ ಅವನು ಅನುಭವಿಸಿದ ನೋವು , ಅವನ ಹಿನ್ನಲೆ ಏನು ಏನ್ನುವುದು ನನಗೆ ಕುತೂಹಲವಾಗಿತ್ತು.

ಅನಿಕೇತನ said...

ನಿಮ್ಮ ಹುಡುಕಾಟದಲ್ಲಿ ಹೊರಬಂದ ಅನುಭವಗಳು , ಭಾವನೆಗಳ Touchನೊಂದಿಗೆ ಆಲೋಚನೆಗೆ ಎಡೆಮಾಡಿಕೊಟ್ಟಿದೆ. Keep up the gud work.

Shree said...

ಚೆನ್ನಾಗಿ ಬರೀತೀರ.. ಲಿ೦ಕಿಸ್ಕೊಳ್ತಿದೀನಿ :)

ಯಜ್ಞೇಶ್ (yajnesh) said...

ಥ್ಯಾಂಕ್ಸ್ ಅನಿಕೇತನ್.

ಥ್ಯಾಂಕ್ಸ್ ಶ್ರೀ,

ನನಗೆ "ಲಿ೦ಕಿಸ್ಕೊಳ್ತಿದೀನಿ " ಅನ್ನೋದು ಬಹಳ ಹಿಡಿಸ್ತು.
ಲಿಂಕ್ ಮಾಡ್ಕೋಳ್ಳಿ. ನಾನು ನಿಮ್ಮ ಬ್ಲಾಗ್ ನ ಲಿ೦ಕಿಸ್ಕೊಳ್ತೀನಿ.

VENU VINOD said...

ನಿಮ್ಮ ಬರಹಗಳಲ್ಲಿ ಡೆಪ್ತ್ ಇದೆ. ಅದರಲ್ಲೂ ಎಲ್ಲಿಗೇ ಪಯಣ...ಮೊದಲ ಬರಹ ಮನಕಲಕಿತು. ನನ್ನ ಪ್ರೀತಿಯ ಅಜ್ಜನ ನೆನಪು ತಂದುಕೊಟ್ಟಿತು. ನಿಮ್ಮ ಬ್ಲಾಗ್ ನನ್ನ ಪುಟದಲ್ಲಿ ಕೊಂಡಿಯಾಗಲಿದೆ.