Thursday, September 23, 2010

ಮೂರ್ಚೆ ಹೋಗೋ ಪ್ರಸಂಗಗಳು

ಮೊನ್ನೆ ಊರಿಗೆ ಹೋಗಿದ್ದೆ. ಅಲ್ಲಿ ನಡೆದ ಕೆಲವು ಮೂರ್ಚೆ ಹೋಗೋ ಪ್ರಸಂಗಗಳು
~~~~~~~~~~

ಘಟನೆ ಒಂದು

ಮಾವನ ಮನೆಗೆ ಹೋಗಿದ್ದೆ. ಅಲ್ಲಿ ಸಿಕ್ಕ ಪುರೋಹಿತರು ಮತ್ತು ನನ್ನ ನಡುವೆ ನಡೆದ ಸಂಭಾಷಣೆ

ಪುರೋಹಿತರುಃ "ನಾನು ನಿಮ್ಮನಿಗೆ ಸುಮಾರು 45 ವರ್ಷದ ಹಿಂದೆ ಹೋಗಿದ್ದಿ. ನಿಮ್ಮನೇಲಿ ಚಂಡಿ ಹೋಮ ಇತ್ತು. ಆಗ ನಿಂಗೆ ಎರ್ಡು ವರ್ಷ ಅನಿಸ್ತು. ಆವಾಗ್ಲೆ ನಿನ್ ಹಳೇ ಹೆಸ್ರು ಮಹೇಶ ಬದ್ಲು ಯಜ್ಞೇಶ್ ಅಂತ ಇಟ್ಟಿದ್ದು"
ನಾನುಃ "!@#$%... (ಹಂಗಾದ್ರೆ ನಂಗೀಗ 47 ವರ್ಷ!!!!..)"

ನಾನು ತಕ್ಷಣ ಮೂರ್ಚೆ ಹೋದೆ!!!

~~~~~~~~~~

ಘಟನೆ ಎರ್ಡು

ಸಮಯವಾಗ್ತಾಯಿತ್ತು. ಪುರೋಹಿತರಿಗೆ ಆದಷ್ಟು ಬೇಗ ಕಾರ್ಯಕ್ರಮ ಮುಗಿಸಬೇಕು. ಕಾರ್ಯಕ್ರಮಕ್ಕೆ ಕುಳಿತವನು ನಾನು

ಪೂಜೆ ಬಾರೀ ಸ್ಪೀಡ್ ನಲ್ಲಿ ನಡಿತಾಯಿತ್ತು. ಪುರೋಹಿತರು ಯಾರು ಇಲ್ಲ ಅಂದ ತಕ್ಷಣ ಮಂತ್ರದ ಸಾಲು ಸಾಲನ್ನೆ ಹಾರಿಸುತ್ತಿದ್ದರು. ನಾನೋ ಪುರೋಹಿತ ಕುಟಂಬದಿಂದ ಬಂದವನು . ಪೂರ್ತಿ ಮಂತ್ರ ಬರದೇ ಇದ್ದರೂ ಸುಮಾರು ಗೊತ್ತು. ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ, ಗಣಪತಿ ಉಪನಿಷತ್ ಎಲ್ಲಾ ಮುಗಿದ ಮೇಲೆ ಪುರೋಹಿತರು ಮತ್ತು ನನ್ನ ನಡುವೆ ನಡೆದ ಸಂಭಾಷಣೆ

ಪುರೋಹಿತರುಃ " ನಿಂಗೆ ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ, ಗಣಪತಿ ಉಪನಿಷತ್ ಎಲ್ಲಾ ಬತ್ತಾ?"

ನಾನುಃ "ಹೇಳಕೆ ಪೂರ್ತಿ ಬತ್ತಲ್ಲೆ. ಆದ್ರೆ ಎಲ್ಲಾ ಗೊತ್ತಿದ್ದು"

ಪುರೋಹಿತರು ತಕ್ಷಣ ಮೂರ್ಚೆ ಹೋದರು!!! (ಅವರ ಬಂಡವಾಳ ನನ್ಗೆ ಗೋತ್ತಾಯ್ತಲ್ಲ ಅಂತ)

~~~~~~~~~~

ಘಟನೆ ಮೂರು
ಪೂಜೆ ಎಲ್ಲಾ ಮುಗಿತು. ಪುರೋಹಿತರು ಆಶೀರ್ವಾದ ಮಾಡ್ತಾಯಿದ್ದರು

ಪುರೋಹಿತರುಃ "ಈ ಕುಟುಂಬಕ್ಕೆ ಒಳ್ಳೇದಾಗ್ಲಿ...................
............................ ನೂತನ ವಧೂ ವರರಿಗೆ ಒಳ್ಳೇದಾಗ್ಲಿ"

ಜಯಶ್ರೀಃ "ರೀ ನಮ್ಗೆ ಮದ್ವೆ ಆಗಿ 4 ವರ್ಷ ಆತು.. ಇವ್ರು ನೂತನ ವಧೂ ವರ ಅಂತ ಹೇಳ್ತಾಯಿದ್ದ" ಅಂತ ಹೇಳ್ತಾ ಹೇಳ್ತಾ ಮೂರ್ಚೆ ಹೋದ್ಲು.

~~~~~~~~~~

ಘಟನೆ ನಾಲ್ಕು

ಸ್ಥಳಃ ಬಂಗಲಗಲ್ಲು ನಾರಾಯಣ ಭಟ್ಟರ
(ನಮ್ಮನೆ) ಮನೆ ದೇವರ ಕೋಣೆ.

ಪಾತ್ರದಾರಿಗಳುಃ ಪುರೋಹಿತರು, ನಾನು ಮತ್ತು ದೇವರ ಕೋಣೆಯಲ್ಲಿದ್ದ ಸಮಸ್ತ ದೇವರುಗಳು. ಎಲ್ಲರೂ ಎದುರು ಬದ್ರು ಕುಳಿತಿದ್ದರು

ಪುರೋಹಿತರುಃ "ಸ್ನಾನ ಆತಾ, ಸಂದ್ಯಾವಂದನೆ ಮಾಡು. ನಾನು ಅಷ್ಟ್ರಲ್ಲಿ ಜಪ ಮಾಡ್ತಿ"
ನಾನುಃ " ಓಂ ಭುವು ರುಗ್ವೇದಾಯಸ್ವಾಹಾ... ಓಂ ಭುವ ಯಜುರ್ವೇದಾಯ ಸ್ವಾಹಾ.....
.......................... ................ ............... .................. .......
................... .............. .................... .............................."

ದೇವರಕೋಣೆಯಲ್ಲಿದ್ದ ಸಮಸ್ತದೇವರುಗಳು ನನ್ನ ಮಂತ್ರ ಕೇಳಿ ಮೂರ್ಚೆ ಹೋಗಿದ್ದರು

ಸ್ವಲ್ಪ ಹಿಂದುಗಡೆ ಇದ್ದ ದೇವ್ರಿಗೆ ನನ್ನ ಮಂತ್ರ ಕೇಳಿಸ್ಲಿಲ್ಲ. ಆ ದೇವರು ಮುಂದೆ ಬಂದು "ಬೆಂಗಳೂರಿಗೆ ಹೋದವನೆ ಸಂದ್ಯಾವಂದನೆಯನ್ನು ಕಲಿ" ಅಂತ ಹೇಳಿದ್ರು.

ಆಗ ನಾನು ಮೂರ್ಚೆ ಹೋದೆ

13 comments:

ಪಾಚು-ಪ್ರಪಂಚ said...

Ha ha...olle moorche prasanga..!

Sir..tamge eega vayassu eshtu..??

ಯಜ್ಞೇಶ್ (yajnesh) said...

Sir.. nimginta 3 varsha doddavanu nanu :)

shridhar said...

he he he ... Odi Moorche Hode :) ...

ಯಜ್ಞೇಶ್ (yajnesh) said...

@ Shridhar... Sakat comments..

Nin comment odi nanu murche hode...

ಭಾಶೇ said...

good ones!

ವಿ.ರಾ.ಹೆ. said...

:) :)

ಮನದಾಳದಿಂದ............ said...

ಹ್ಹ ಹ್ಹ ಹ್ಹಾ........
ಮಡದಿ, ಪುರೋಹಿತರು, ನೀವು ಕೊನೆಗೆ ದೇವರನ್ನೂ ಬಿಡಲಿಲ್ಲವಾ ಮೂರ್ಚೆ?

ತೇಜಸ್ವಿನಿ ಹೆಗಡೆ said...

ಇವನ್ನೆಲ್ಲಾ ಓದ್ತಾ ನಕ್ಕೂ ನಕ್ಕೂ ನಾನು ಮೂರ್ಚೆ ಹೋಗ್ದೇ ಹೋದದ್ದೇ ದೊಡ್ಡದು! :D :D mastiddu...

ಮನಮುಕ್ತಾ said...

:)..:)..: 3ಚೆ..

ಶರಶ್ಚಂದ್ರ ಕಲ್ಮನೆ said...

ಯಜ್ಞೇಶಣ್ಣ,
ನಾನೂ ಆಲ್ ಮೋಸ್ಟ್ ಮೂರ್ಛೆ ಹೋದಿ ನೀ ಬರೆದ ಪ್ರಸಂಗಗಳನ್ನ ಓದಿ :P

ವಿನಾಯಕ ಕೆ.ಎಸ್ said...

ಜನಿವಾರ ಇಲ್ಲದೆ ಇರೋದನ್ನ ನೋಡಿ ಪುರೋಹಿತರು ಮೂರ್ಛೆ ಹೋದ ಅನ್ನೋದು ಬಿಟ್ಟು ಹೋಯ್ದು ನೋಡು!! ಒಳ್ಳೆ ಬರಹ...
-ಕೋಡ್ಸರ

ಯಜ್ಞೇಶ್ (yajnesh) said...

@ವಿನಾಯಕ.. ಜನಿವಾರ ಇದ್ದಪ್ಪ.. ಎರಡು ಜನಿವಾರ ಇದ್ದು :)

ಸುಮ said...

ಹ..ಹ.. ಚೆನ್ನಾಗಿದ್ದು .