Sunday, December 13, 2009

ನಾನೇನಾಗಬೇಕು?

ನಾನೇನಾಗಬೇಕು?
ಪ್ರಶ್ನೆ ನನ್ನಲ್ಲಿ ಅನೇಕ ಸಲ ಹುಟ್ಟಿದೆ ಮತ್ತು ಉತ್ತರ ಸಿಗದೇ ಮತ್ತೆ ಮನಸ್ಸಿಂದ ಮರೆಯಾಗಿದೆ ಮತ್ತೆ ಹುಟ್ಟುತ್ತಲಿದೆ.

ನಿಮಲ್ಲಿಯೂ ಈ ಪ್ರಶ್ನೆ ಒಂದಲ್ಲಾ ಒಂದು ಸಾರಿ ಬಂದಿರೊತ್ತೆ. ಈ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿಲ್ಲಾ ಅಂದ್ರೆ ನಿಮಗೆ ಜೀವನದಲ್ಲಿ ಗುರಿಯೇಕೆ ಬೇಕು ಅಂತಿರತ್ತೆ ಅಥವಾ ಗುರಿಯೇನು ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರೊತ್ತೆ.



ಹೌದು ನಾನೇನಾಗಬೇಕು????

ಮನಸ್ಸಲ್ಲಿ ಎನೇನೋ ಹೋಯ್ದಾಟ ನಡಿತಾಯಿರೊತ್ತೆ. ಇತ್ತೀಚೆಗಷ್ಟೆ ವಿಜಯಕರ್ನಾಟಕದ ಲವಲವಿಕೆಯಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಏನೇನು ಸಾಧಿಸಬೇಕು ಅಂತ ಬರೆದುಕೊಂಡು (ನೂರಕ್ಕೂ ಹೆಚ್ಚು) ಅವೆಲ್ಲವನ್ನು ಸಾಧಿಸಿದನಂತೆ!!!. ಅದರಿಂದ ಸ್ಪೂರ್ತಿ ಪಡೆದು ನಾನು ಬರೆದೆ. ಸಾಧಿಸೋಕೆ ಆಗತ್ತೋ ಇಲ್ಲವೋ.. ಆದ್ರೂ ಬರೆದೆ...ಹದಿನೈದರಿಂದ ಇಪ್ಪತ್ತು ಗುರಿಗಳನ್ನು ಬರಿಯೋಕೆ ಸಾಧ್ಯವಾಯುತು ನೋಡಿ. ಆಮೇಲೆ ಏನು ಬರೆಯೋದು ಅಂತ ಗೊತ್ತಾಗ್ತಾಯಿಲ್ಲ. ನನ್ನ ಬಂಡವಾಳ ಏನೆಂದು ನನಗೇ ಗೊತ್ತಾಯಿತು :).... ನೀವು ಒಮ್ಮೆ ಪ್ರಯತ್ನಿಸಿ (ಇಷ್ಟರೊಳಗೆ ಪ್ರಯತ್ನ ಪಡದಿದ್ದರೆ)

ಈಗ ಬರೆದ ಗುರಿಯ ವಿಮರ್ಶೆ ಮಾಡ್ತಾಯಿದ್ದೀನಿ. ಸ್ವಲ್ಪವಾದರೂ ಗುರಿಯತ್ತ ಪ್ರಯತ್ನ ಮಾಡೋಣ ಅಂತ. ಅವ್ನು ಇದ್ನಂತೆ ಆಮೇಲೆ ಹೋದ್ನಂತೆ (ಮೇಲೆ) ಅನ್ನೋದು ಆಗೋದು ಬೇಡ.

3 comments:

ಭಾಶೇ said...

Chintanege haccuva Baraha!

ಸಾಗರದಾಚೆಯ ಇಂಚರ said...

ತುಂಬಾ ಒಳ್ಳೆಯ ಬರಹ
ಅದರಲ್ಲೂ ಅದರ ಶೀರ್ಷಿಕೆ ಇನ್ನೂ ಹಿಡಿಸಿತು

Guruprasad said...

ಒಳ್ಳೆಯ ಬರಹ,,, ಖಂಡಿತ,,, ನೀವು ಏನು ಆಗಬೇಕು,, ಏನು ಸಾದಿಸಬೇಕು ಅನ್ನೋದನ್ನ ಬರ್ಕೊಂಡ್,,, ಪ್ರತಿದಿನ ಅದನ್ನ ಚೆಕ್ ಮಾಡ್ಕೋತಾ ಇದ್ರೆ,,,, ನಿಜವಾಗ್ಲೂ ನಾವು ಏನ್ ಆಗಬೇಕು,, ಏನ್ ಮಾಡಬೇಕು ಅನ್ನೋದದ ಅರಿವು ಯಾವಾಗಲು ಇರುತ್ತೆ...... Best of luck,,, . ನಾವು
ಒಂದು ಕೈ ನೋಡೋಣ...
ಗುರು