Friday, October 3, 2008

ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ

"ದೇಶ ಸುತ್ತು..ಕೋಶ ಓದು" - ನನಗಿಷ್ಟವಾದ ನಾಣ್ಣುಡಿ. ಈ ಓದಿನ ಗೀಳು ಸಣ್ಣವನಿದ್ದಾಗಲಿಂದ ಬಂದಿದ್ದು. ಇದು ಬಂದಿದ್ದು ನಮ್ಮ ಮನೆಯಿಂದ. ಮನೆಯಲ್ಲಿ ಇದ್ದ ಮಹಾಭಾರತದ ೧೮ ದೊಡ್ಡ ದೊಡ್ಡ ಪುಸ್ತಕಗಳು ಮತ್ತು ರಾಮಾಯಣದ ಪುಸ್ತಕಗಳು ನನ್ನ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಯಿತು ಅನ್ನಬಹುದು. ನಂತರದ ಹಂತದಲ್ಲಿ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದ ಮೇಲೆ ಓದೋ ಹವ್ಯಾಸ ಸ್ವಲ್ಪ ಕಡಿಮೆಯಾಯಿತು. ಕೆಲಸಕ್ಕೆ ಸೇರಿದ ಮೇಲಂತೂ ಬಹಳ ಕಡಿಮೆ. ಓದೋದಕ್ಕೆ ಸಮಯ ಸಿಗೋದಿಲ್ಲ ಅನ್ನೋದಕ್ಕಿಂತ ಓದುವ ಆಸಕ್ತಿ ಕಡಿಮೆ ಅನ್ನಬಹುದು. ಈಗ ಕಳೆದ ಒಂದೆರಡು ವರ್ಷಗಳಿಂದ ಮತ್ತೆ ಆಸಕ್ತಿ ಬಂದಿದೆ.

ನನ್ನ ಆಫೀಸು ಇರೋದು ಎಲೆಕ್ಟಾನಿಕ್ ಸಿಟಿನಲ್ಲಿ. ಮನೆಗೂ ಆಫೀಸಿಗೂ ಕೇವಲ 35 ಕಿ.ಮಿ ಮಾತ್ರ. ಮೊದಲು ಕಾರಿನಲ್ಲಿ ಹೋಗ್ತಾಯಿದ್ದೆ. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಕಾರು ಓದ್ಸೋದು ಅಂದರೆ ದೊಡ್ಡ ಯಜ್ಞ ಮಾಡಿದ ಹಾಗೆ. ಅದಕ್ಕೆ ಆಫೀಸು ಬಸ್ಸನ್ನು ಆಯ್ಕೆ ಮಾಡಿಕೊಂಡೆ. ದಿನಾ ನಾನು ಸುತ್ತೋದು ಬರೋಬ್ಬರಿ 70 ಕಿ.ಮಿ. ದಿನದಲ್ಲಿ ಮೂರು ತಾಸು ಬಸ್ಸಿನಲ್ಲಿ ಪ್ರಯಾಣ. ಆ ಸಮಯ ಹೇಗೆ ಕಳೆಯೋದು ಅನ್ನೋದೇ ದೊಡ್ಡ ಸಮಸ್ಯೆ. ಆಗ ಇಲ್ಲಸಲ್ಲದ ವಿಷಯಗಳು ಎಲ್ಲ ನೆನಪಿಗೆ ಬರೊತ್ತೆ. ಅದರಿಂದ ಪ್ರಯೋಜನವು ನಾಸ್ತಿ. ಆಗ ಹೊಳೆದಿದ್ದು ಪುಸ್ತಕಗಳು. ದಿನದ ಮೂವತ್ತು ನಿಮಿಷನಾದ್ರೂ ಓದಬೇಕು ಅಂತ ತೀರ್ಮಾನ ಮಾಡಿದೆ. ಮತ್ತೆ ಓದಲು ಪ್ರಾರಂಭಿಸಿದೆ.


ಇತ್ತೀಚೆಗಷ್ಟೆ ಗೊತ್ತಾಗಿದ್ದು ಪ್ರತಾಪಸಿಂಹರ ಅಂತರಜಾಲ. ಅದರಲ್ಲಿ ಇದ್ದ "ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ" ಎನ್ನುವ ಪುಸ್ತಕದ ಪಿ.ಡಿ.ಎಫ್ ಪ್ರತಿ ಸಿಕ್ಕಿತು. ಇಂದು ಆಫೀಸಿನಲ್ಲಿ ಹೆಚ್ಚು ಕೆಲಸವಿಲ್ಲದ ಕಾರಣ ಬೆಳಿಗ್ಗೆಯಿಂದ ಓದಲು ಪ್ರಾರಂಭಿಸಿ ಈಗ ಮುಗಿಸಿದೆ. "ರಾಷ್ಟ್ರದ ನಂ-೧ ಮುಖ್ಯಮಂತ್ರಿ ಮತ್ತು ಮುಂದಿನ ಪ್ರಧಾನಿ" ಎಂದೇ ಬಿಂಬಿತರಾದ ನರೇಂದ್ರ ಮೋದಿ ನಡೆದು ಬಂದ ದಾರಿ ಮತ್ತು ಅವರು ಗುಜರಾತನ್ನು ಮಾದರಿಯಾಗಲು ಹಾಕಿದ ಕಾರ್ಯಕ್ರಮಗಳು ಮುಂತಾದವುಗಳ ಬಗ್ಗೆ ಬೆಳಕನ್ನು ಲೇಖಕರು ಚೆಲ್ಲಿದ್ದಾರೆ. ನಿಮಗೆ ಬಿಡುವಾದಾಗ ಓದಿ.


ಲಿಂಕ್: http://pratapsimha.com/books/narendra-modi.pdf

3 comments:

ತೇಜಸ್ವಿನಿ ಹೆಗಡೆ said...

Interesting.. ಓದಕಾತು ತಗಂಡು. ಪ್ರತಾಪ್ ಸಿಂಹ ನನ್ನ ಮೆಚ್ಚಿನ ಲೇಖಕರೂ ಹೌದು.

Madhooo said...

Thank u so much for that link. Definitely want to read it soon.:)

ಚಿನ್ಮಯ said...

ಇಲೆಕ್ಟ್ರಾನಿಕ್ ಸಿಟಿಗೆ ದಿನನಿತ್ಯ ಪ್ರಯಾಣಿಸುವವರಿಗೆ ಇರುವ ಸುಲಭ ಮಾರ್ಗವೆಂದರೆ ಓದುವುದು, ಅದಾಗದಿದ್ದರೆ ನಿದ್ದೆ ಮಾಡುವುದು. ನಾನು ಓದಿ ಬೇಜಾರಾದಾಗ ಎರಡನೆಯದನ್ನೇ ಮಾಡುತ್ತಿದ್ದೆ.
ಪುಸ್ತಕ ಪರಿಚಯದ ಜೊತೆ ಅದರ ಬಗ್ಗೆ ನಿಮ್ಮ ಅನಿಸಿಕೆಗಳನ್ನೂ ಬರೆದರೆ ಚೆನ್ನಾಗಿರುತ್ತಿತ್ತು.
-ಚಿನ್ಮಯ.