ಮೊನ್ನೆ ಬೆಳಿಗ್ಗೆ ಮಧು ಫೋನ್ ಮಾಡಿದ್ದ. "ನನ್ನ ಫ್ರೆಂಡಿಗೆ ಹುಷಾರಿಲ್ಲ. ಅವರು ತುಂಬಾ ಬಡವರು, ಮೊನ್ನೆ ಮೊನ್ನೆಯಷ್ಟೇ ಅವನ ತಾಯಿ ಆರೋಗ್ಯ ಸರಿ ಇರ್ಲಿಲ್ಲ. ಅದಕ್ಕೆ ಬಹಳ ಖರ್ಚಾಗಿತ್ತು. ಈಗ ಇವನಿಗೆ ಹುಶಾರಿಲ್ಲ. ಆಸ್ಪತ್ರೆಯಲ್ಲಿದ್ದಾನೆ. ಆಪರೇಷನ್ನಿಗೆ ಸುಮಾರು ಎರಡು ಲಕ್ಷದ ಮೇಲೆ ಖರ್ಚಾಗತ್ತಂತೆ. ನಿನ್ನೆ ಆಸ್ಪತ್ರೆಗೆ ಹೋಗಿದ್ದೆ. ನನ್ನ ಕಾಲು ಹಿಡಿದು ಅತ್ತ. ಹೇಗಾದ್ರು ಮಾಡಿ ಹಣ ಸಹಾಯ ಮಾಡು ಅಂತ ಅತ್ತಿದ್ದ. ನಿನಗೆ ಬಹಳ ಜನ ಪರಿಚಯ ಇದ್ದಾರಲ್ಲ. ಅವನಿಗೆ ಸಹಾಯ ಮಾಡು. ಐವತ್ತು ನೊರಾದರೂ ತೊಂದರೆಯಿಲ್ಲ" ಅಂದ.
ಸಾವು ತನ್ನನ್ನು ಕರಿತಾಯಿದೆ ಎಂದು ಒಬ್ಬ ವ್ಯಕ್ತಿಗೆ ತಿಳಿದಾಗ ಅವನ ಮನಸ್ಸಲ್ಲಿ ಎನೇನು ಯೋಚನೆಗಳು ಉದ್ಬವಿಸಬಹುದು ಗೆಳೆಯರೇ. ಹೇಗಾದರೂ ಮಾಡಿ ತಾನು ಬದುಕಬೇಕು ಅಂತ ಮೊದಲು ಮನಸ್ಸಿಗೆ ಬರುತ್ತದೆ ಅಲ್ಲವೇ.
"ವೈದ್ಯೋ ನಾರಾಯಣೋ ಹರಿ" ಅಂತ ವೇದ ಹೇಳಿದೆ. ವೈದ್ಯರು ದೇವರಿಗೆ ಸಮಾನ. ಎಲ್ಲ ಕೆಲಸಗಳಿಗಿಂತ ಹೆಚ್ಚು ಮನಸ್ಸಿಗೆ ಸಮಾಧಾನ ಸಿಗೋದು ಒಬ್ಬ ವ್ಯಕ್ತಿಯ ಪ್ರಾಣ ಉಳಿಸೋದರಲ್ಲಿ. ಅದರಲ್ಲಿ ಸಿಗೋ ಸಮಾಧಾನ ಬೇರೆ ಎಲ್ಲೂ ಸಿಗೊಲ್ಲ. ಅದು ವೈದ್ಯವೃತ್ತಿಗೆ ಮಾತ್ರ. ಆದರೆ ಇಂದಿನ ವ್ಯಾಪಾರೀಕರಣದಲ್ಲಿ ಮಾನವತೆಗೆ ಬೆಲೆಯಿಲ್ಲ. ಬರೀ ದುಡ್ಡಿಗೆ ಮಾತ್ರ ಬೆಲೆ. ಒಬ್ಬ ವ್ಯಕ್ತಿಯನ್ನು ಅಳೆಯೋದು ದುಡ್ಡಿನ ಮೇಲೆ. ಇಂದಿನ ಕೆಲವು ವೈದ್ಯರು ಮೇಲೆ ಹೇಳಿದ ಗಾದೆಗೆ ಉಲ್ಟಾಯಿರ್ತಾರೆ. ರೋಗವನ್ನೇ ಎನ್ಕ್ಯಾಷ್ ಮಾಡಿಕೊಂಡು ಅದು ಇದು ಅಂತ ದುಡ್ಡು ಸುಲಿಯೋರೆ ಜಾಸ್ತಿ. ಅಲ್ಲೋ ಇಲ್ಲೋ ಓಂದಿಷ್ಟು ಒಳ್ಳೆಯ ವೈದ್ಯರುಗಳು ಸಿಗ್ತಾರೆ. ಇಂದಿನ ಆಧುನಿಕ ವೈದ್ಯಕೀಯ ಸೌಲಭ್ಯಗಳು ಬಡವರಿಗೆ ಸಿಗೋದು ಬಹಳ ಕಷ್ಟ.
ಮಧು ನನಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ನಾನು ಆಯ್ತು ನನ್ನ ಎಲ್ಲರಿಗೂ ವಿಷಯ ತಿಳಿಸ್ತೇನೆ. ಖಂಡಿತಾ ಸಹಾಯ ಮಾಡ್ತೀನಿ. ಆದ್ರೆ ಅವನ ಪೂರ್ತಿ ವಿಷಯ ತಿಳಿಸು. ಆತನ ವಿವರ, ರೋಗದ ಬಗ್ಗೆ, ಆಸ್ಪತ್ರೆ ಬಗ್ಗೆ ಎಲ್ಲ ನನಗೆ ಹೇಳು ಅಂದಿದ್ದೆ. ವಿವರವಿಲ್ಲದೇ ಇದ್ದರೆ ಕೆಲವರು ಸಹಾಯ ಮಾಡೊಲ್ಲ. ಅದಕ್ಕೆ ವಿವರ ಕೊಡು ಅಂದೆ. ಅದಕ್ಕೆ ಮಧು ಇನ್ನು ಅರ್ದ ಘಂಟೆಯೊಳಗೆ ವಿವರ ಕೊಡ್ತೀನಿ ಅಂದ. ತಕ್ಷಣ ನನ್ನ ಆತ್ಮೀಯ ಸ್ನೇಹಿತರಿಗೆ ವಿಷಯ ತಿಳಿಸಿದ್ದೆ.
ಸುಮಾರು ಎರಡು ಘಂಟೆಯ ಮೇಲೆ ಮಧು ಫೋನ್ ಮಾಡಿದ್ದ. ಆತನ ದ್ವನ ಬಾಡಿತ್ತು. ಆತನ ವಿವರ ಕೊಡು ಅಂದೆ. ಅದಕ್ಕೆ ಆತ ಇಲ್ಲ. ಆತ ತೀರಿಕೊಂಡ ಅಂತ ನನಗೆ ಹೇಳ್ದ. ಮನಸ್ಸಿಗೆ ಬಹಳ ಬೇಸರವಾಯ್ತು.
ದೇವರು ಆ ಗೆಳೆಯನ ಆತ್ಮಕ್ಕೆ ಶಾಂತಿ ನೀಡಲಿ. ಆತನ ಮನೆಯವರಿಗೆ ಧೈರ್ಯ ನೀಡಲಿ.
3 comments:
ಹಾಯ್ ಮಹೆಶಣ್ಣ............
ತುಂಬ ಚನ್ನಾಗಿದೆ ಲೇಖನ. ವಿಷಯ ಓದಿ ತುಂಬಾ ಬೇಸರ ಆಯ್ತು. ನೀನು ಮಾಡಬೇಕಿದ್ದ ಒಂದು ಮಹದುಪಕಾರ ಸ್ವಲ್ಪದರಲ್ಲಿ ತಪ್ಪಿಸಿಕೊಂಡೆ. ಅವತ್ತಿನ ಮಟ್ಟಿಗೆ ನೀನು ದೌರ್ಭಾಗ್ಯವಂತ ಅಲ್ವಾ?
ಹಾಯ್.........
ಶ್ಶ್ಯೆ.... ಹೀಗಾಗಬಾರದಿತ್ತು. ಘಟನೆಯನ್ನು ಓದಿ ದುಃಖ ಉಮ್ಮಳಿಸಿತು. ಅವನು ಬದುಕಿದ್ದಿದ್ದರೆ (ನಾವೆಲ್ಲ ಸೇರಿ) ಅವನ ಬದುಕನ್ನು ಹಸನಾಗಿಸಬಹುದಿತ್ತು.
ಆತ್ಮೀಯ ಸುಬ್ಬು ಮತ್ತು ಕೃಷ್ಣಾನಂದ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
Post a Comment