ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲ. ಹುಡುಕ್ತಾ ಇದೀನಿ.
ಹುಡುಕಾಟನೋ ಅಥವಾ ಹುಡುಗಾಟನೋ ಅಂತ ಕೇಳ್ಬೇಡಿ.
ನಮ್ಮ ಜೀವನವೇ ಓಂದು ರೀತಿ ಹುಡುಕಾಟ ಅಲ್ವಾ? ಕೆಲವರಿಗೆ ಗುರಿ ಇರತ್ತೆ, ಕೆಲವರಿಗೆ ಇರಲ್ಲ. ಸುಮ್ಮನೇ ಹುಡುಕ್ತಾ ಇರ್ತಾರೆ. ಇಂಟರ್ ವ್ಯೂನಲ್ಲಿ ನಲ್ಲಿ ಕೇಳಿದ ಹಾಗೆ ಯಾರಾದ್ರು ಬಂದು ನಿಮ್ಮ ಜೀವನದ ಗುರಿ ಎನು ಅಂತ ಕೇಳಿದ್ರೆ ಯಾರ ಹತ್ರನೂ ಸರಿಯಾದ ಉತ್ತರ ಇರಲ್ಲ.

ನಮ್ಮೂರಲ್ಲಿ ದನಕಾಯೋ ಮಂಜು ಅಂತ ಓಬ್ಬ ಇದ್ದ. ಅವನಿಗೆ ಮಕ್ಕಳು ಇರ್ಲಿಲ್ಲ. ದಿನ ಬೆಳಗಾದ್ರೆ ಏಲ್ಲರ ಮನೆ ದನ ಹೊಡೇದುಕೊಂಡು ಗುಡ್ಡಕ್ಕೆ ಹೋಗ್ತಾ ಇದ್ದ. ಹೋಗೋವಾಗ ಮದ್ಯಾನ್ನಕ್ಕೆ ಬುತ್ತಿ ತಗೊಂಡು ಹೋಗಿ ಸೂರ್ಯ ಮುಳುಗೋ ಹೊತ್ತಿಗೆ ವಾಪಾಸ್ ಬರ್ತಾ ಇದ್ದ. ನಾವು ಅವಾಗ ಸಣ್ಣವರು. ಅಲ್ಲಿ ಮಂಜು ಏನ್ ಮಾಡ್ತಾನೆ ಅಂತ ಅಮ್ಮನ ಹತ್ರ ಕೇಳಿದ್ದೆ. ಅಲ್ಲಿ ದನ ಕಾಯ್ತಾನೆ ಅಂದಿದ್ಲು. ನಾವು ಸರಿಯಾಗಿ ಓದದೆ ಹೋದ್ರೆ ನೀನು ದನಕಾಯೋಕೆ ಹೋಗು ಅಂತಿದ್ಲು. ದನ ಕಾಯೋದು ಅಂದ್ರೆ ಜನ ನಗ್ತಾರೆ ಅಂತ ಆಗ ನನಗನಿಸ್ತಾ ಇತ್ತು.
ಈಗ e-ಕೆಲಸ, ಈ ಡೆಡ್ ಲೈನು, ಈ ಟ್ರಾಫಿಕ್ಕು ಏಲ್ಲಾ ನೋಡಿದ್ರೆ ದನ ಕಾಯೋದೇ ವಾಸಿ ಅನ್ಸತ್ತೆ. ಅಲ್ಲಿ ಹೋಗಿ ದನ ಮೇಯಸ್ಲಿಕ್ಕೆ ಬಿಟ್ಟು, ಕಥೆ, ಕವನ, ಪ್ರಕೃತಿ ಏಲ್ಲಾ ನೋಡ್ಕೊಂಡು ಇರೋದೇ ವಾಸಿ ಅಲ್ವಾ?ಇಲ್ಲಿ ಕತ್ತೆ ದುಡಿದ ಹಾಗೆ ದುಡಿದು, ತಿಂಗಳ ಕೊನೇ ಯಾವಾಗ ಬರತ್ತೆ ಅಂತ ಕಾದು, ಬಂದ ದುಡ್ದನ್ನು ಮೂರೇ ದಿನದಲ್ಲಿ ಮುಕ್ಕಿ ಮತ್ತೆ ತಿಂಗಳ ಕೊನೆಗೇ ಕಾಯ್ಬೇಕು. ಇಷ್ಟೆಲ್ಲಾ ಮಾಡೋದು ಯಾಕೆ? ಹೊಟ್ಟೆಗಾಗೀ ಗೇಣು ಬಟ್ಟೆಗಾಗಿ ಅಲ್ವಾ?
ಸುಖ, ಸಂತೋಷ, ನೆಮ್ಮದಿ ಏಲ್ಲಾ ನಮ್ಮೊಳಗೇ ಇರತ್ತೆ ಅಲ್ವಾ ?
ಕಾಲನ ಹೊಡೆತಕ್ಕೆ ಸಿಕ್ಕು ಈಗ ದನಕಾಯೋ ಕೆಲಸನೂ ಮಾಯವಾಗಿ ಹೋಗಿದೆ. ಮನೆಯಲ್ಲಿ ದನ ಸಾಕೋದು ಕಷ್ಟ, ಅದರ ನಿರ್ವಹಣೆ ಕಷ್ಟ ಅಂತ ಏಲ್ಲಾ ಸಬೂಬು ಕೊಟ್ಟು ಜನ ಅನಾದಿ ಕಾಲದಿಂದ ಬಂದ ಜೀವನದ ಅವಿಭಾಜ್ಯ ಅಂಗವಾದ ಕೊಟ್ಟಿಗೆಯನ್ನು ಏತ್ತಂಗಡಿ ಮಾಡಿದಾರೆ. ಈಗ ದನಕಾಯೋ ಮಂಜುನೂ ಇಲ್ಲ, ದನಕಾಯೋ ಕೆಲ್ಸನೂ ಇಲ್ಲ. ಅವನು ಸತ್ತ ಕೆಲವು ವರ್ಷದ ನಂತರ ಅವನ ಹೆಂಡತಿ ಮಂಜಿಯೂ ಅವನ ದಾರಿ ಹಿಡಿದ್ಲು. ರಸ್ತೆ ಬದಿ ಅವನ ಮುರಕಲು ಗುಡಿಸಲು, ಅರ್ದಬಿದ್ದ ಗೋಡೆಗಳು ನಮ್ಮನ್ನು ನೋಡಿ ಯಾವದೂ ಶಾಶ್ವತ ಅಲ್ಲ ಅಂತ ಅಣಕಿಸ್ತಾ ಇದ್ದ ಹಾಗೆ ಅನ್ನಿಸತ್ತೆ.
ಮೊದ್ಲು ಏನ್ ಬರೀಬೇಕು ಅಂತ ಗೊತ್ತಾಗ್ಲಿಲ್ಲ. ಆದ್ರೆ ಬರೀತಾ ಹೋದ ಹಾಗೆ ವಿಷಯಗಳು ನೆನಪಾಗ್ತಾ ಬಂತು.

6 comments:
First of all, nimma blog theme "hudukaata" tumba chennagide. Jeevana paryanta, naavelaaru yavdo nirantara hudukaata daali irtivi. haagagi ee blog theme "hudukaata" tumba arthagarbhitavaagi ide.:)
Dana kaayo manjana kathe tumba hidistu. Howdu, sometimes I feel that their lives are more meaningful ours.
My apologies for this English script here. My machine does not support kannada font so I am forced to write in English.:)
ಥ್ಯಾಂಕ್ಸ್ ಮಧು,
ನೀವೂ ಸಹ ನನ್ನ ಬ್ಲಾಗ್ ಹುಡುಕಾಟದಲ್ಲಿ ಸಿಕ್ಕಿದ್ರಿ!!!
ಹಾಂ, ದನಕಾಯೋ ಮಂಜು ಫೋಟೋಗಳನ್ನ ಹಿಂದೆ ತೆಗೆದಿದ್ದೆ. ಅದು ಈಗ ಏಲ್ಲಿದೆ ಅಂತ ಹುಡುಕಬೇಕು ಅಷ್ಟೆ.
ಫೋಟೋ ತೆಗಿತೀನಿ ಅಂದ ಕ್ಷಣ ತನ್ನ ಹರುಕು ಬಟ್ಟೆ ಬದಲಾಯಿಸಿ ಬರ್ತೀನಿ ಅಂತ ಹೇಳಿ ಹೊಸ ಬಟ್ಟೆ ತೊಟ್ಟು ಬಂದಿದ್ದ.
ನೀವು ಕನ್ನಡವನ್ನು Kannada Type Pad ನಲ್ಲಿ ಟೈಪ ಮಾಡಿ ಅದನ್ನ ಬ್ಲಾಗ್ ನಲ್ಲಿ ಹಾಕಬಹುದು
olle araMbha...heegi barita iri...
nanagu e deadline,cost of Quality,
apprciation,month endnalli saal..saakagi hogide...
ಥ್ಯಾಂಕ್ಸ್ ಮಹಾಂತೇಶ್,
ಬ್ಲಾಗ ಬರೀಬೇಕು ಅಂತ ಬಹಳ ದಿನಂದಿಂದ ಯೋಚಿಸ್ತಾ ಇದ್ದೆ. ಆದ್ರೆ ಈ ಕೆಲ್ಸದ ಒತ್ತಡದಲ್ಲಿ ಮುಹೂರ್ತ ಬಂದಿರ್ಲಿಲ್ಲ. ಈಗ ಬಂದಿದೆ, ಆದ್ರೆ ಇದು ಎಷ್ಟು ದಿನ ನಡೆಯತ್ತೆ ಅಂತ ಗೊತ್ತಿಲ್ಲ.
-ಯಜ್ಙೇಶ್
ಯಜ್ಞೇಶಣ್ಣ, its a very nice move that u came up with a blog.
ಚನಾಗ್ ಬರದ್ದೆ. ನಂಗನ್ನುಸ್ತು: ಇತ್ತೀಚಿಗೆ ಎಲ್ರಿಗೂ ಈ ನಗರ ಜೀವನದ ಏಕತಾನತೆ ಬೇಜಾರ್ ಬೈಂದು ಅಂತ. ಎಲ್ರೂ ನಿನ್ ಹಂಗೇ, ನನ್ ಹಂಗೇ nostolgic ಆಗ್ತಾ ಇದ್ದ. ಹಿಂಗೇ ಆದ್ರೆ, ಹಳ್ಳಿ ಜೀವನಾನೇ ಬೆಸ್ಟು ಅಂತ ಎಲ್ರೂ ತೀರ್ಮಾನ ಮಾಡಿ ಪೇಟೆ ತೊರೆದು ಹೋಗೋ ದಿನ ಮುಂದೊಮ್ಮೆ ಬರ್ತಿಕ್ಕೇನೋ ಅಂತ? Although, ನನ್ನ ಆಶಾವಾದ 'ತೀರಾ' ಅನ್ಸಿರೂ.... ಅರೆ! ಯಾಕಾಗ್ಲಾಗ?
ಕೊಟ್ಟಿಗೆ, ದನಕಾಯೋ ಹುಡುಗರ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಬರೀತಾ ಇರು.
ಥ್ಯಾಂಕ್ಸ್ ಸುಶ್ರುತ,
ಮನುಷ್ಯ ಆಶಾವದಿಯಾಗಿರೊದು ಒಂದು ರೀತಿ ಒಳ್ಳೇದು. ಮುಂದೊಂದು ದಿನಾ ಆ ಟೈಮ್ ಬರ್ಲಿ ಅಂತ ಹಾರೈಸೋಣ
Post a Comment