ಇದು ಮೊನ್ನೆ ನಮ್ಮ ಕುಟುಂಬದ ನಾವಿಕನಾದ ಪ್ರೀತಿಯ ಅಜ್ಜನ ಚಿತೆಗೆ ಅಗ್ನಿಸ್ಪರ್ಷ ಮಾಡಿದಾಗ ನೆನಪಾಗಿದ್ದು. ಈಗ ಅಜ್ಜ ಏಲ್ಲಿರಬಹುದು,ಏನ್ ಮಾಡ್ತಾಯಿರಬಹುದು ಏಂಬೆಲ್ಲಾ ತರ್ಕಗಳು ಮನಸ್ಸಲ್ಲಿ ಬಂತು. ಮನುಷ್ಯ ವಿಜ್ಙಾನದಲ್ಲಿ ಏಷ್ಟೇ ಸಾಧನೆ ಮಾಡಿದರೂ ಇದುವರೆಗೂ ಯಾರಿಗೂ ಹುಟ್ಟು ಸಾವುಗಳ ಬಗ್ಗೆಯಾಗಲಿ, ಸತ್ತ ಮೇಲೆ ಮನುಷ್ಯ ಏಲ್ಲಿಗೆ ಹೋಗ್ತಾನೆ? ಹುಟ್ಟೊಕ್ಕಿಂತ ಮುಂಚೆ ಏಲ್ಲಿದ್ದ ಏನ್ನುವುದು ತಿಳಿದಿಲ್ಲ.
ಬೆಂಗಳೂರಿನಿಂದ ಊರಿಗೆ ಹೋದಾಗ ಮನೆಯಲ್ಲಿ ಸ್ಮಷಾನ ಮೌನ. ಅಜ್ಜನ ದೇಹ ಚಾವಡಿಯಲ್ಲಿತ್ತು. ಅರ್ದ ಮುಚ್ಚಿದ ಕಣ್ಣುಗಳು, ಬರೀ ಮೂಳೆಗಳ ದೇಹ, ಅರ್ದ ತೆರೆದ ಬಾಯಿ, ಜೀವನದ ದಾರಿ ದಿಕ್ಕಾಗಿದ್ದ ಗಂಡನ ಕಳೆದುಕೊಂಡ,ಅತ್ತೂ ಅತ್ತೂ ಇನ್ನು ಕಣ್ಣಲ್ಲಿ ನೀರಿಲ್ಲದೆ ಅಜ್ಜನ ಪಕ್ಕ ಕುಳಿತಿದ್ದ ದೊಡ್ಡಮ್ಮ(ಅಜ್ಜಿ)..ಇದೆಲ್ಲ ಇನ್ನೂ ಕಣ್ಮುಂದೆ ಬರುತ್ತೆ. ನಂತರ ಅಜ್ಜನ ದೇಹವನ್ನು ಅಂಗಳದಲ್ಲಿಟ್ಟು, ಕೆಲವು ಧಾರ್ಮಿಕ ಕ್ರಿಯೆಯ ನಂತರ ದೇಹವನ್ನು ಗುಡ್ಡಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಮತ್ತೆ ಕೆಲವು ಧಾರ್ಮಿಕ ಕ್ರಿಯಗಳು.ಅಜ್ಜನ ಸುತ್ತ ಬಟ್ಟೆಯಿಂದ ಗಾಳಿ ಬೀಸಿದಾಗ ಓಮ್ಮೆ ಆಶ್ಚರ್ಯವಾಯ್ತು. ಅದರ ಅರ್ಥ ತಿಳಿದಾಗ ಮನಸ್ಸು ಏಲ್ಲೊ ಹರಿದಾಡುತ್ತಿತ್ತು. ನಿನ್ನ ಮುಂದಿನ ಪಯಣವು ಸುಖಕರವಾಗಿರಲಿ, ತಂಪಾದ ಗಾಳಿ ಬೀಸಲಿ ಏಂದು. ಅಜ್ಜನ ಚಿತೆ ಸಂಪೂರ್ಣ ಉರಿದು ಹೋಗುವ ತನಕ ಅಲ್ಲೇ ಇದ್ದೆ. ಚಿತೆ ಉರಿದ ಹಾಗೇ ನನ್ನ ಮನಸ್ಸೂ ಸಹ ಶೂನ್ಯದತ್ತ ಹೊಯ್ತು. ಮನಸ್ಸಲ್ಲಿ ಹೇಳಲಾಗದ ವೇದನೆ. ಅಜ್ಜ ಇನ್ನೂ ಇದ್ದಾನೇ ಅಂತ ಏಲ್ಲೊ ಹೇಳುವ ಓಳಮನಸ್ಸು...
ಏಲ್ಲಿಗೇ ಪಯಣಾ.....ಯಾವುದೋ ದಾರಿ ...ಏಕಾಂಗಿ ಸಂಚಾರಿ ...
ಏಲ್ಲಿಗೇ ಪಯಣಾ.....ಯಾವುದೋ ದಾರಿ ...ಏಕಾಂಗಿ ಸಂಚಾರಿ ...
2 comments:
ಸ್ವಾಮಿ....ನಿಮ್ಮ ಲೇಖನ ಚೆನ್ನಾಗಿದ್ದಂಗಿದೆ, ಆದ್ರೆ ಓದೋಕೆ ಸಾದ್ಯ ಆಗ್ತಿಲ್ಲ.. ಪದಗಳು ಪುಡಿ..ಪುಡಿ ಆಗಿ ಕಾಣ್ತಾವಿ..ಇದು ಸರಿ ಯಾವಾಗ ಸರಿ ಆಗುತ್ತೆ..
ಬಹುಶಃ ನಿಮ್ಮ ಸಿಸ್ಟಮ್ ನಲ್ಲಿ ಕನ್ನಡ ಫಾಂಟ್ ಇಲ್ಲ ಅನ್ಸತ್ತೆ. ನನ್ನ ಸಿಸ್ಟಮ್ ನಲ್ಲಿ ಸರಿಯಾಗಿ ಬರ್ತಾಯಿದೆ.
Post a Comment