Wednesday, December 24, 2008

ವಿದಾಯ

ಆತ್ಮೀಯರೇ,

ಇಂದು ನನಗೆ ಬಹಳ ಬೇಸರವಾಗುತ್ತಿದೆ. ಜೀವನದ ಪ್ರತಿ ಗಳಿಗೆ ನನ್ನ ಜೊತೆಯಿದ್ದು ನನ್ನ ಅವಿಬಾಜ್ಯ ಅಂಗವಾದ ನಿಮ್ಮನ್ನು ಇಂದು ನನ್ನ ಹಿತಕ್ಕೋಸ್ಕರ ಬಲಿ ಕೊಡುತ್ತಿದ್ದೇನೆ. ಕ್ಷಮೆಯಿರಲಿ. ನನಗೂ ನಿಮ್ಮನ್ನು ಬೀಳ್ಕೊಡಲು ಇಷ್ಟವಿಲ್ಲ. ಆದರೆ ವಿದಿಯಾಟ. ವಿದಿಯಾಟದ ಮುಂದೆ ಹುಲುಮಾನವರ ಆಟವೇನೂ ಸಾಗದು. ನಾವೆಲ್ಲಾ ಪಾತ್ರದಾರಿಗಳು. ಸೂತ್ರದಾರಿ ಅವನು.

ನಾನು ಬೆಳೆದ ಹಾಗೆ ನೀವೂ ನನ್ನೊಟ್ಟಿಗೆ ಬೆಳೆದಿರಿ. ಹಾಗೆಯೇ ನನ್ನ ಏಳುಬೀಳಿನಲ್ಲಿ ಬಾಗಿಯಾಗಿ ನನಗೆ ಸ್ಪೂರ್ತಿಯಾದಿರಿ. ನಿಮ್ಮಿಂದ ನನಗೆ ಯಾವುದೇ ತೊಂದರೆಯಾಗಲಿಲ್ಲ. ಆದರೂ ನಿಮ್ಮನ್ನು ದೂರ ಮಾಡುತ್ತಿದ್ದೇನೆ.

ನಾವೇನು ಮಾಡಿದೆವು ಅಂತ ನೀವು ನನ್ನ ಪ್ರಶ್ನಿಸಬಹುದು.
ನೀವು ಹುಟ್ಟಿದ ಸ್ಥಳ ಸರಿಯಾದುದಲ್ಲ. ಪ್ರತಿಯೊಬ್ಬರು ಉತ್ತಮ ಸಂಸ್ಕಾರವಂತರಾಗಬೇಕಾದರೆ ಉತ್ತಮ ಪರಿಸರವಿರಬೇಕು. ಉತ್ತಮರ ಸಹವಾಸವಿರಬೇಕು. ಆಗಲೇ ಆತನಲ್ಲಿ ಜೀವನದ ತತ್ವಗಳ ಬಗ್ಗೆ ಜಾಗೃತಿ ಮೂಡುತ್ತದೆ. ಆದರೆ ನಿಮ್ಮ ವಿಷಯದಲ್ಲಿ ಹಾಗಾಗಲಿಲ್ಲ. ಇದು ನಿಮ್ಮ ತಪ್ಪಲ್ಲ. ಮತ್ತೆ ಹೇಳ್ತೇನೆ, ಇದು ವಿದಿಯಾಟ. ಅದಕ್ಕೆ ನಿಮ್ಮನ್ನು ನನ್ನಿಂದ ದೂರ ಮಾಡುತ್ತಿದ್ದೇನೆ.

ಮೊನ್ನೆ ನಿಮ್ಮನ್ನು ಕಳಿಸಿಕೊಡುವಾಗ ನನಗೆ ಬಹಳ ನೋವಾಯಿತು. ಬಾಯಿ ಕಿತ್ತು ಬಂದ ಹಾಗಾಯಿತು. ನನ್ನನ್ನು ಕಳಿಸದಿರು ಅಂತ ಮೌನವಾಗಿ ನೀವಿಬ್ಬರು ನನ್ನನ್ನು ತಬ್ಬಿ ಹಿಡಿದಿದ್ದಿರಿ. ಆದರೂ ಕಳಿಸಿಕೊಟ್ಟೆ. ಈಗ ನಿಮ್ಮ ಜಾಗದಲ್ಲಿ ಹೊಸತು ಕೃತಕ ಹಲ್ಲುಗಳು ಬಂದಿವೆ. ಹೊಂದಿಕೊಳ್ಳಲು ಕೆಲವು ದಿನಗಳಾಗಬಹುದು. ಅಲ್ಲಿಯ ತನಕ ಕಿರಿ ಕಿರಿಯಾಗುತ್ತದೆ. ಆಗ ನಿಮ್ಮ ನೆನಪಾಗುತ್ತದೆ.

ಮನಸು ಹೇಳ ಬಯಸಿದೇ ನೂಂರೊದು
ತುಟಿಯ ಮೇಲೆ ಬಾರದಿರೇ ಮಾತೊಂದು
ವಿದಾಯ ಗೆಳೆಯರೇ
ವಿದಾಯ ಗೆಳೆಯರೇ,
ವಿದಾಯ ಹೇಳ ಬಯಸಿರುವೇ ನಾನಿಂದು

ಏನಿದು ವಿದಾಯ ಅನಿಸಿರಬಹುದು. ಇದು ದಂತ ವಿದಾಯ!!!
ಹುಟ್ಟಿನಿಂದ ನನ್ನ ಜೊತೆಗೆ ಸಿಹಿ ಕಹಿಯನ್ನುಂಡ ಮತ್ತು ಹುಟ್ಟುವಾಗಲೇ ವಕ್ರವಾಗಿದ್ದ ಎರಡು ಹಲ್ಲುಗಳನ್ನು ಮೊನ್ನೆ ದೂರಮಾಡಿದೆ. ಅಗ ನನಗನಿಸಿದ್ದು ಹೀಗೆ.

8 comments:

Harisha - ಹರೀಶ said...

ಹಹ್ಹ.. ಮಜಾ ಬರದ್ದೆ

Sushrutha Dodderi said...

ಹೆಹೆ! ಚನಾಗಿದ್ದು! :D

ಶರಶ್ಚಂದ್ರ ಕಲ್ಮನೆ said...

ಹ್ಹೆ ಹ್ಹೆ ಹ್ಹೆ...... ಬ್ಲಾಗ್ ಬರ್ಯದಕ್ಕೆ ವಿದಾಯ ಹೇಳ್ತಾ ಇದ್ಯೆನ ಅನ್ಕಂಡಿ... ಅಂತು ಒಳ್ಳೆ ಶಾಕ್ ಕೊಟ್ಟೆ :)

Madhooo said...

ಹಲ್ಲಿಗೆ ಕೂಡ ಇಷ್ಟು ಚೆನ್ನಾಗಿ ವಿದಾಯ ಹೇಳಬಹುದು ಎಂದು ಗೊತ್ತಾಗಿದ್ದೇ ಇವತ್ತು ನಿಮ್ಮ ಪೋಸ್ಟ್ ಓದಿದ ಬಳಿಕ.:)

ಯಜ್ಞೇಶ್ (yajnesh) said...

ದಂತ ವಿದಾಯದ ಬಗ್ಗೆ ಕಮೆಂಟಿಸಿದ ಎಲ್ಲರಿಗೂ ವ್ಯಯಕ್ತಿಕ ಮತ್ತು ಕೃತಕ ಹಲ್ಲಿನ ಪರಾವಾಗಿ ಧನ್ಯವಾದಗಳು

:)

ತೇಜಸ್ವಿನಿ ಹೆಗಡೆ said...

ಯಜ್ಞೇಶ್ ಅವರೆ,

ನಿಜಕ್ಕೂ ಗಾಬರಿಗೊಳಿಸಿದಿರಿ ಒಂದು ಕ್ಷಣ :) ಅಂತೂ ಇಂತೂ ವಕ್ರದಂತಕ್ಕೆ ಮುಕ್ತಿ ಬಂತು ನೋಡಿ. ಇಷ್ಟವಾಯಿತು ಹಾಸ್ಯಬರಹ.

shivu.k said...

ಏನೋ ಅಂದುಕೊಂಡಿದ್ದೆ.....ಹಲ್ಲು ಅಂತ ಅಮೇಲೆ ಗೊತ್ತಾಯಿತು.....ಚೆನ್ನಾಗಿ ಬರೆದಿದ್ದೀರಿ.....

ಮತ್ತೆ ನನ್ನ ಬ್ಲಾಗಿಗೆ ಹೊಸ ಲೇಖನವೊಂದನ್ನು ಹಾಕಿದ್ದೇನೆ....ಬಿಡುವುಮಾಡಿಕೊಂಡು ಬನ್ನಿ.....

Anonymous said...

yajnesh avare,
olle baraha. blog tumba chennaagide.
vinayaka kodsra