Monday, June 30, 2008

ಆ ಬೆಟ್ಟದ ತುದಿಯಲ್ಲಿ

ಮನದಲ್ಲಿ ನಲಿವಿತ್ತು,
ಮುಖದಲ್ಲಿ ನಗುವಿತ್ತು,
ಜೊತೆಗೆ ಚುಮು ಚುಮು ಚಳಿಯಿತ್ತು,
ಆ ಬೆಟ್ಟದ ತುದಿಯಲ್ಲಿ

ಯಾರ ಹಂಗಿರಲಿಲ್ಲ,
ಯಾರ ಕೊಂಗಿರಲಿಲ್ಲ,
ಯಾರ ನೆನಪೂ ಇರಲಿಲ್ಲ,
ಆ ಬೆಟ್ಟದ ತುದಿಯಲ್ಲಿ

ಅಲ್ಲಿ ಮೌನವಿತ್ತು,
ಅಲ್ಲಿ ಶೂನ್ಯವಿತ್ತು,
ಅಲ್ಲಿ ಧ್ಯಾನವಿತ್ತು,
ಆ ಬೆಟ್ಟದ ತುದಿಯಲ್ಲಿ

ದಿನದ ಜಂಜಾಟವಿರಲಿಲ್ಲ,
ದಿನದ ಕೆಲಸವಿರಲಿಲ್ಲ,
ದಿನದ ಒತ್ತಡವಿರಲಿಲ್ಲ
ಆ ಬೆಟ್ಟದ ತುದಿಯಲ್ಲಿ

- ಕೆಲವು ದಿನಗಳ ಹಿಂದೆ ಮುನ್ನಾರಿಗೆ ಹೋದಾಗ ನನಗನಿಸಿದ್ದು. ಮೇಲಿನ ಚಿತ್ರ ಮುನ್ನಾರಿನ ಟಾಪ್ ಸ್ಟೇಷನ್ ದು

4 comments:

ತೇಜಸ್ವಿನಿ ಹೆಗಡೆ said...

ಬೆಟ್ಟದ ತುದಿಯಲ್ಲಿ ಕವನದಷ್ಟೇ ಸುಂದರ ಚಿತ್ರ ಕೂಡ. ಆ ತುದಿಗೆ ಮಾನಸವೊಮ್ಮೆ ಹೋಗಿಬಂತು.

ಯಜ್ಞೇಶ್ (yajnesh) said...

ತೇಜಸ್ವಿನಿ ಹೆಗಡೆಯವರೇ,

ಕವನ ಬರಿದೇ ಎಷ್ಟೋ ವರ್ಷಗಳಾಗಿತ್ತು. ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

Unknown said...

ಯಾವುದನ್ನು ಮೆಚ್ಚಲಿ ಎಂಬ ಗೊಂದಲ. ಕವನಕ್ಕಿಂತ ಫೋಟೋ ಸೂಪರ್, ಫೋಟೋ ಕಿಂತ ಕವನ ಉತ್ತಮ.

ಯಜ್ಞೇಶ್ (yajnesh) said...

Thanks Raghann