Thursday, April 19, 2007

ಹಿರಿಯರಲ್ಲಿ ಭಕ್ತಿ ಭಾವ ತುಂಬಿರಬೇಕು....

ಮುದ್ದು ಮಾತು ಕೇಳಿ,
ಓ ಮುದ್ದು ಮಕ್ಕಳೇ,
ಜಾಣರಾಗಿ ಬಾಳೀ ನನ್ನ ಹೊನ್ನ ಹೂಗಳೇ,
ಮಾತಲ್ಲೀ ಹಿತವಿರಲೇಬೇಕು,
ನಿಮ್ಮ ನಡೆಯಲ್ಲೀ ಹಿತವಿರಲೇಬೇಕು,
ನೀವು ಏಲ್ಲೇ ಇರಲೀ, ನಾಳೆ ಹೇಗೇ ಇರಲೀ,
ಜನ ಮೆಚ್ಚುವಂತೆ ನೀವಿರಬೇಕು.

ಬಹಳ ಸರಳ, ಅಷ್ಟೇ ಅರ್ಥಗರ್ಬಿತವಾಗಿದೆ.

ತನಗೊಂದು ಮಗುವಾಗತ್ತೇ ಅಂತ ಗೊತ್ತಾದ ತಕ್ಷಣ, ತಂದೆ, ತಾಯಿ ಕನಸು ಕಾಣ್ಲಿಕ್ಕೆ ಪ್ರಾರಂಭ ಮಾಡ್ತಾರೆ. ನನ್ನ ಮಗ / ಮಗಳನ್ನು ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಅಂತ ಏನೇನೋ ಕನಸು ಕಂಡಿರ್ತಾರೆ. ತಾವು ಜೀವನದಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚು ತಮ್ಮ ಮಕ್ಕಳು ಸಾಧಿಸಬೇಕು, ತಮಗಿಂತ ಒಳ್ಳೆ ಜೀವನ ನಡೆಸ್ಬೇಕು, ಸಮಾಜದಲ್ಲಿ ಓಳ್ಳೆ ಗೌರವ ತಗೋಬೇಕು, ತಮ್ಮ ಇಳಿಗಾಲದಲ್ಲಿ ಆಸರೆಯಾಗಿರ್ತಾರೆ .... etc.

ಆದರೆ ಏಷ್ಟೋ ತಂದೆ ತಾಯಿಗಳ ಕನಸು ಬರೀ ಕನಸಾಗೇ ಇರತ್ತೆ. ನನಸಾಗೋದೆ ಇಲ್ಲ. ಮಕ್ಕಳು ಬೆಳೆದ ಹಾಗೆ ತಮ್ಮ ತಂದೆ ತಾಯಿಯಲ್ಲಿ ತಪ್ಪು ಹುಡುಕೋಕೆ ಪ್ರಾರಂಭ ಮಾಡ್ತಾರೆ. ಅದ್ರಲ್ಲೂ ಹೆಂಡತಿ ಮಾತು ಕೇಳಿ ಹೆತ್ತಪ್ಪ, ಹೆತ್ತಮ್ಮನ ಕಡೆಗಣಿಸೋರೆ ಜಾಸ್ತಿ. ಮದುವೆಯಾದ ಮೇಲೆ ತಮ್ಮ ಮಕ್ಕಳ ಬಗ್ಗೆ ಕನಸು ಕಾಣ್ತಾಯಿರ್ತಾರೆ. ವಯಸ್ಸಾದ ಅಪ್ಪ ಅಮ್ಮರನ್ನು ಕಡೆಗಣಿಸಿರುತ್ತಾರೆ. ನಾಳೆ ನಮ್ಮ ಮಕ್ಕಳು ಸಹ ನಮ್ಮ ಹಾಗೆ ಆಗ್ತಾರೆ ಅಂತ ಆದರೆ ಅವರಿಗೆ ಗೊತ್ತಾಗೋದೇ ಇಲ್ಲ. ಆದರೆ ತಮಗೆ ವಯಸ್ಸಾದಾಗ ಅವರಿಗೆ ತಮ್ಮ ತಂದೆ ತಾಯಿ ಅನುಭವಿಸಿದ ನೋವು ನೆನಪಾಗೊಲ್ಲ. ತಮ್ಮ ಮಕ್ಕಳ ಬಗ್ಗೆ ಕೋಪಯಿರತ್ತೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು.

ಹೆತ್ತು, ಹೊತ್ತು, ಪ್ರೀತಿಯನ್ನು ಧಾರೆಯೆರೆದ ಅಪ್ಪ ಅಮ್ಮ ಕೊನೆಗೆ ವೃದ್ದಾಶ್ರಮದಲ್ಲಿ ತಮ್ಮ ಬಗ್ಗೆ ತಾವು ಹಳಿದುಕೊಳ್ತಾಯಿರ್ತಾರೆ.

ನಾನು ಕಾಲೇಜ್ ನಲ್ಲಿ ಓದೋವಾಗ ಒಂದು ಫೋಟೋಗ್ರಾಫಿ ಅಸೈನ್ಮೆಂಟ್ ಗೋಸ್ಕರ ಕಾಲೇಜ್ ಪಕ್ಕದ್ದಲ್ಲೇ ಇದ್ದ ವೃದ್ದಾಶ್ರಮಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಅಜ್ಜಿಯ ಫೋಟೋ ತಗೋವಾಗ ಆ ಅಜ್ಜಿ, ವೃದ್ದಾಶ್ರಮ ನೋಡ್ಕೊಳ್ಳೋನ ಹತ್ರ "ಏನಪ್ಪ,ಬೆಳಗ್ಗೆಯಿಂದ ತಿಂಡಿ ಕೊಟ್ಟಿಲ್ಲ, ಯಾವಾಗ ಕೊಡ್ತೀಯಾ" ಅಂತ ಅಂದ್ಲು. ಆಗ ಸಮಯ 12:30 ದಾಟಿತ್ತು. ನನಗೆ ಅಪರಾದಿ ಭಾವನೆ ಕಾಡ್ತಾಯಿತ್ತು.

ನಾಳೆ ನಮಗೂ ವಯಸ್ಸಾಗತ್ತೆ, ನಮ್ಮ ಮಕ್ಕಳು ನಮ್ಮನ್ನು ಕಡೆಗಣಿಸಬಹುದು... ಆವಾಗ ನಾನು ನನ್ನ ತಂದೆ ತಾಯಿಯರನ್ನು ಚೆನ್ನಾಗಿ ನೋಡ್ಕೊಂಡಿಲ್ಲ ಅಂತ ಪಶ್ಚಾತ್ತಾಪಪಡೋದಕ್ಕಿಂತ ಈಗಲೇ ಏಚ್ಚೆತ್ತು ತಂದೆ ತಾಯಿಯರನ್ನು ಚೆನ್ನಾಗಿ ನೋಡ್ಕೊಳ್ಳೋದು ಓಳ್ಳೇದು ಅಲ್ವಾ?

ಹಾಗಾದರೆ ಇದಕ್ಕೆ ಪರಿಹಾರ ಇಲ್ವಾ ಅಂತ ಅನಿಸಬಹುದು. ಬೆಳೆಯುವ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಭಾರತೀಯತೆ ಅಂದ್ರೆ ಏನು? ಏಲ್ಲವನ್ನು ಸರಿಯಾದ ರೀತಿಯಲ್ಲಿ ಹೇಳಿದರೆ ಇದನ್ನು ತಡೆಗಟ್ಟಬಹುದು ಅನ್ಸತ್ತೆ.

ಮೇಲಿನ ಹಾಡಲ್ಲಿ ಇನ್ನೊಂದು ವಾಕ್ಯ ಬರತ್ತೆ " ಹಿರಿಯರಲ್ಲಿ ಭಕ್ತಿ ಭಾವ ತುಂಬಿರಬೇಕು...."

4 comments:

ಸುಶ್ರುತ ದೊಡ್ಡೇರಿ said...

ಬೆಳೀತಾ ಬೆಳೀತಾ ನಮಗೆ ಹೆತ್ತವರು foolish ಅನ್ನಿಸಲಿಕ್ಕೆ ಶುರು ಆಗೋದು ನಿಜ. ಅವರ ಜ್ಞಾನ ನಮಗೆ ತುಂಬಾ ಸಿಲ್ಲಿ ಅನ್ಸುತ್ತೆ ಎಷ್ಟೋ ಸಲ. ಅವರ ಸಾಧನೆ ಏನೂ ಅಲ್ಲ ಅನ್ಸುತ್ತೆ. ಆದರೂ ಅವರ ಸ್ಥಾನದಲ್ಲಿ ನಿಂತು ಯೋಚಿಸಿದಾಗ ಅವರು ಮಾಡಿದ್ದು ನಿಜಕ್ಕೂ ದೊಡ್ಡ achievement ಅನ್ಸುತ್ತೆ. ಅಷ್ಟೊಂದು ಅಕ್ಕರಾಸ್ಥೆಯಿಂದ ನಮ್ಮನ್ನು ಸಾಕಿದ ತಂದೆತಾಯಿಯರನ್ನ ಚೆನ್ನಾಗಿ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ.. ಚಿಂತನೆ ಮನ ಮುಟ್ಟಿತು.

Aniketana said...

Life is a circle. Even we will be getting old and things repeat..

Good one .

Vikas Hegde said...

ನೀವು ಹೇಳಿರೋದು ನೂರಕ್ಕೆ ನೂರು ಸತ್ಯ

Anonymous said...

"ಅದ್ರಲ್ಲೂ ಹೆಂಡತಿ ಮಾತು ಕೇಳಿ ಹೆತ್ತಪ್ಪ, ಹೆತ್ತಮ್ಮನ ಕಡೆಗಣಿಸೋರೆ ಜಾಸ್ತಿ."

illi neevu ondu vishya mnaritah ideera.
manega banda sosena sariyagi nodkolde, avla mele adikara chalsakke hogi, avlu thavu heldange kelbeku antha yenu yenu hucchu asse itkondu. amele vardkshini anthella kata kotaga, maga tale sari idrae avra maathu kelolla.
yavglu sosena yaake bytheera? nimam appana mammna thappu iruthe antah yaake yochne madolla?
bari horgade ninthu comment madokintah situation nalli iddu nodi.
hendthi ella bittu gandana joteh bandaga , gandana responsiblity adu avlanan chenagi nodkolodu. appa amma heliddu ella keloke agolla.
tehy are also humans and they also amke msitakes