Thursday, October 23, 2008

ಎ ವೆಡ್ನೆಸ್ ಡೇ

ಫಿಲ್ಮ್ ನೋಡೋದು ಅಂದ್ರೆ ನನಗೆ ಸ್ವಲ್ಪ ಅಲರ್ಜಿ. ಎಲ್ಲೋ ಅಪರೂಪಕ್ಕೆ ಒಳ್ಳೇ ಫಿಲ್ಮ್ ಬಂದ್ರೆ ಹೋಗೋಣ ಅನ್ಸತ್ತೆ. ಇತ್ತೀಚೆಗಂತೂ ಯಾವ್ದಾದ್ರು ಒಂದು ಫಿಲ್ಮ್ ಹಿಟ್ ಆದ್ರೆ ಅದೇ ರೀತಿ ಇರುವ (ಕಥೆ, ಸಂಗೀತ, ಸಾಹಿತ್ಯ ಏಲ್ಲಾ ಆಲ್ಮೋಸ್ಟ್ ಕಾಪಿ) ಫಿಲ್ಮ್ ಗಳು ಸಾಲಗಿ ಬರುತ್ತದೆ. ಯಾವ್ದಾದ್ರು ಡಮ್ ಅಂದ್ರೆ ಅಲ್ಲಿಗೆ ಆ ಸೀರೀಸ್ ಸ್ಟಾಪ್ . ಮಿತಿಮೀರಿದ ಕ್ರೌರ್ಯ್ಯ, ಕಾಮ, ಅರ್ಥವಿಲ್ಲದ ಹಾಸ್ಯ, ಮನಸಿಗನಿಸಿದ ಸಾಹಿತ್ಯವೆಲ್ಲಾ ಜಾಸ್ತಿಯಾಗಿದೆ. ಸಂಗೀತವಂತೂ ಕೇಳಲಸಾದ್ಯ. ಅರವತ್ತು-ಏಪ್ಪತ್ತರ ಹಾಡಿನ(ಅದ್ರಲ್ಲೂ ಪಾಪ್ ಮ್ಯೂಸಿಕ್ ಕಾಪಿ ಮಾಡೋದು ಜಾಸ್ತಿ) ಒಂದು ತುಣುಕನ್ನು ತೆಗೆದುಕೊಂಡು ಸ್ವಲ್ಪ ಬದಲಾಯಿಸಿದರೆ ಆಯ್ತು. ಈಗ ಯಾರು ಬೇಕಾದ್ರು ನಿರ್ದೇಶಕರಾಗಬಹುದು. ಒಂದೆರಡು ಬೇರೆ ಭಾಷೆ ಅಥವಾ ಅದೇ ಭಾಷೆಯ ಫಿಲ್ಮ್ ನೋಡಿ ಅಲ್ಲಿಂದ ಇಲ್ಲಿಂದ ತಂದು ಹಾಕಿದ್ರೆ ಆಯ್ತು. ಇವುಗಳ ಮದ್ಯೆ ಅಲ್ಲಿ ಇಲ್ಲಿ ಒಂದೆರಡು ಒಳ್ಳೇ ಫಿಲ್ಮ್ ಗಳು ಬರುತ್ತದೆ.

ಮೊನ್ನೆಯಷ್ಟೇ ರಾಘು ಒಂದು ಸಿ.ಡಿ ತಂದುಕೊಟ್ಟಿದ್ದ. ಯಾವ ಫಿಲ್ಮ್ ಅಂತ ಕೇಳಿದ್ದೆ. "ಎ ವೆಡ್ನೆಸ್ ಡೇ" ಅಂದ. ಯಾವ ಭಾಷೆದು, ಇಂಗ್ಲೀಷಿಂದಾ ಅಂದೆ. ಅದಕ್ಕೆ ಅಲ್ಲ ಹಿಂದಿದು, ಚೆನ್ನಾಗಿದೆ ಅಂದ. ಆಯ್ತು ನೋಡೋಣ ಅಂತ ಸುಮ್ಮನಾದ. ಭಾನುವಾರ ಸ್ವಲ್ಪ ಫ್ರೀ ಇದ್ದಿದ್ರಿಂದ ಸ್ವಲ್ಪ ನೋಡೋಣ, ಚೆನ್ನಾಗಿದ್ರೆ ಫುಲ್ ನೋಡಿದ್ರಾಯ್ತು ಅಂತ ಹಾಕಿದೆ. ಫಿಲ್ಮ್ ಫುಲ್ ಮುಗಿಯೋತನಕ ಮೇಲೇಳಲಿಲ್ಲ. ಫಿಲ್ಮ್ ತುಂಬಾ ಚೆನ್ನಾಗಿದೆ. ಹಿರೋ ಹಿರೋಯಿನ್ನು ಮರ ಸುತ್ತೋ ಹಾಡುಗಳಿಲ್ಲ. ಅನಗತ್ಯ ಸಂಬಾಷಣೆಯಿಲ್ಲ. ಹಾಸ್ಯಕ್ಕಾಗಿಯೇ ಬಳಸಿಕೊಂಡ ವ್ಯಕ್ತಿಗಳಿಲ್ಲ. ಫಿಲ್ಮ್ ನ ಕೊನೆಯ ತನಕ ಯಾರು ಹಿರೋ ಅನ್ನುವ ಪ್ರಶ್ನೆ ಕಾಡತ್ತೆ. ವಿಲನ್ ಯಾಕೆ ಹಾಗೆ ಮಾಡ್ತಾಯಿದ್ದಾನೆ ಅನ್ನೋದು ಮನಸ್ಸಲ್ಲಿ ಕಾಡತ್ತೆ.

ನಿರಜ್ ಪಾಂಡೇಯವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಇತ್ತೀಚಿನ ದಿನಗಳಲ್ಲಿ ಬಂದ zತ್ತಮ ಚಿತ್ರವೆನ್ನಬಹುದು. ನಾಸಿರುದ್ದೀನ್ ಶಾ ಮತ್ತು ಅನುಪಮ್ ಖೇರ್ ಅವರ ಅಭಿನಯವಿರುವ ಚಿತ್ರದ ಸಾರಾಂಶ ಭಯೋತ್ಪಾದನೆಗೆ ಸಾಮಾನ್ಯ ವ್ಯಕ್ತಿಯ ಸೇಡು ಅಥವಾ ಪ್ರತಿಕ್ರಿಯೆಯನ್ನೊಳಗೊಂಡಿದೆ. ನಿಮಗೆ ಬಿಡುವಾದಾಗ ಒಮ್ಮೆ ನೋಡಿ. ಹಾಂ..ಗೆಳೆಯ ರವೀಂದ್ರ "ಮುಂಬೈ ಮೇರಿ ಜಾನ್" ಫಿಲ್ಮ್ ಬಗ್ಗೆ ಹೇಳಿದ್ದ. ಅದನ್ನು ನೋಡಬೇಕು. ನಿವೇನಾದ್ರು ನೋಡಿದ್ರೆ ಹೇಗಿದೇ ಅಂತ ಹೇಳಿ.

8 comments:

Anonymous said...

OK

shivu K said...

ಸಾರ್,
ನನಗೂ ಈ ಸಿನಿಮಾ ನೋಡಬೇಕು ಅನ್ನಿಸುತ್ತಿದೆ. ನನ್ನ ಗೆಳೆಯರು ತುಂಬಾ ಹೇಳಿದ್ದಾರೆ. ಈ ಮಧ್ಯೆ ನಾನು ಮುಂಬೈ ಮೇರಿ ಜಾನ್ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿದೆ. ಅದೇ ಹಳೆಯ ಹಳಸಲು ಕಥೆಗಳ ನಡುವೆ ವಿಭಿನ್ನವಾದ ನಿರೂಪಣೆಯ ಸಿನಿಮಾ. ಬಿಡುವಾದಾಗ ನೋಡಿ.

ಶರಶ್ಚಂದ್ರ ಕಲ್ಮನೆ said...

ನಾನು ಈ ಸಿನೆಮ ನೋಡಿದೀನಿ, ಚನ್ನಾಗಿದೆ. ನೀವು ಹೇಳಿದಂತೆ ಯಾವುದೇ ಅನಾವಶ್ಯಕ ದೃಶ್ಯವಾಗಲಿ ಮಾತುಕತೆಗಳಿಲ್ಲದೆ ಅಚ್ಚುಕಟ್ಟಾಗಿದೆ.

ಯಜ್ಞೇಶ್ (yajnesh) said...

@ಶರಶ್ಚಂದ್ರ ಕಲ್ಮನೆ, @ shivu

ಪ್ರತಿಕ್ರಿಯೆಗಳಿಗೆ ಧನ್ಯವಾದಗಳು

Seema Hegde said...

ನಂದು ಸಿನಿಮಾ ನೋಡುವ ಜಾಯಮಾನ ಅಲ್ಲ. ಆದ್ರೆ ಈ ಸಿನಿಮಾ ಚೊಲೋ ಇದ್ದು ಹೇಳಿ ಎಲ್ಲರಿಂದಲೂ ಕೇಳಿದ್ದಿ. ಮುದ್ದಾಂ ನೋಡ್ತಿ :)

ವಿಕಾಸ್ ಹೆಗಡೆ said...

howdu, nanu ee cinema noDide. v.gud cinema. ending dialogues anthu super.

ಸಿರಿರಮಣ said...

ಯಜ್ಞ, ಹಾಂಗಾರೆ ಡಿವಿಡಿ ತಂದೇ ಬುಡ್ತ್ನ ! ಅಕ್ಕ ?

Sushma Sindhu said...

ಹಾಯ್ ಯಜ್ಞೇಶ್ ರವರೆ,
ನನ್ನ ಬ್ಲಾಗ್ ಗೆ ಭೇಟಿಯಿತ್ತಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಸಂಗ್ರಹ, ಹುಡುಕಾಟದಲ್ಲೆಲ್ಲಾ ಸಂಚರಿಸಿ ಖುಷಿಯಾಯ್ತು. A Wednesday ಖಂಡಿತಾ ಒಮ್ಮೆ ನೋಡುವೆ.
~ಸುಷ್ಮಸಿಂಧು