Thursday, September 25, 2008

ಇಲ್ಲ... ಇಲ್ಲ.. ಇಲ್ಲ

ಯಾಕೋ ಮೊದಲಿನಂತೆ
ಬರೆಯಬೇಕಿನಿಸುವುದಿಲ್ಲ,
ಬರೆಯಲೇ ಬೇಕೆಂದು ಕುಳಿತಾಗ
ಮನಸು ಓಡುವುದಿಲ್ಲ,
ಬರೆಯಲು ಮನಸು ಬಂದಾಗ
ಸಮಯ ನನ್ನಲ್ಲಿರುವುದಿಲ್ಲ.

ನಾಲ್ಕು ಚೌಕದ ಒಳಗಿದ್ದಾಗ
ಹೊರ ಪ್ರಪಂಚದರಿವಿರುವುದಿಲ್ಲ,
ಹೊರಗೆ ಹೋಗಲೆಂದರೆ
ಕೆಲಸ ಬಿಡುವುದಿಲ್ಲ,
ಹೊರಗೆ ಕಾಲಿಟ್ಟಾಗ
ಸಮಯ ನನ್ನಲ್ಲಿರುವುದಿಲ್ಲ.

ದಿನದ ಕೆಲಸದ ನಡುವೆ
ಸಮಯದ ಅರಿವಿರುವುದಿಲ್ಲ,
ಮಳೆ ಗಾಳಿ ಚಳಿ ಬಿಸಿಲು
ಎನಗೆ ತಿಳಿಯುವುದಿಲ್ಲ,
ತಿಳಿಯುವ ಮನಸ್ಸಿದ್ದರೂ
ಸಮಯ ನನ್ನಲ್ಲಿರುವುದಿಲ್ಲ.

3 comments:

Unknown said...

wow, simple words- super meaning.

intha kavana nodidaga hotte uriyutte. nanu bareyabhudittu anta.

thank you

ಯಜ್ಞೇಶ್ (yajnesh) said...

ಸ್ಪೂರ್ತಿಯ ಅಲೆಯೆಬ್ಬಿಸಿದ್ದಕ್ಕೆ ಥ್ಯಾಂಕ್ಸ್ ರಾಘಣ್ಣ

shivu.k said...

ಸರಳವಾದ ಕವನದಲ್ಲಿ ನಿಜವನ್ನೇ ಹೇಳಿದ್ದೀರಿ..! ಯಾಕಂದ್ರೆ ನನಗೂ ಹೀಗೆ ಆಗುತ್ತಿರುತ್ತದೆ.
ಶಿವು.ಕೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.

ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿ ವಿಳಾಸ:
http://camerahindhe.blogspot.com/