Wednesday, May 30, 2007

ಹೆಸರು...

ಹೆಸರು...

ಅದು ನಮ್ಮನ್ನು ಗುರುತಿಸೋಕೆ ಅಂತ ಇಟ್ಟಿರೋದು ಅಂತಿರಾ?. ಹೀಗೆ ಹೆಸರೇ ಇಲ್ಲ್ದೇ ಇದ್ರೆ ಚೆನ್ನಾಗೋರ್ತಾಯಿತ್ತು. ಯಾರು ಯಾರನ್ನು ಕರೆದ್ರು ಅಂತ ಗೊತ್ತಾಗ್ತಾಯಿರಲಿಲ್ಲ. ಈ ಹೆಸರು ಕಂಡುಹಿಡಿದವರು ಯಾರೋ ಏನೋ !!! ಎಲ್ಲ ವಿಚಿತ್ರ !!!

ಎಷ್ಟೋ ಜನ ತಮ್ಮ ಹೆಸರು ಚೆನ್ನಾಗಿಲ್ಲ ಅಂತ ಅಪ್ಪ, ಅಮ್ಮನ್ನ ಬೈತಾರೆ. ಪಾಪ, ಅವ್ರೇನು ಮಾಡ್ತಾರೆ. ತಮಗಿಷ್ಟದ್ದನ್ನು ಇಟ್ಟಿರಬಹುದು. ಜಾತಕದ ಪ್ರಕಾರ ಹೆಸರು ಇಟ್ಟಿರಬಹುದು. ದೇವರ ಹೆಸರಿಟ್ಟ್ತೀನಿ ಅಂತ ಹರಕೆ ಹೊತ್ತ್ಗೊಂಡು ಇಟ್ಟಿರಬಹುದು. ತಮ್ಮ ಮನೆಯ ಹಿರಿಯರ ಹೆಸರು ನೆನಪಿರಲಿ ಅಂತ ಅಜ್ಜ ನ ಹೆಸರು ಇಟ್ಟಿರಬಹುದು (ಅಪ್ಪನ ಹೆಸರು ಗಣೇಶ, ಮಗನ ಹೆಸರು ಗಣೇಶ !!!. ಆದರೆ ನನಗೆ ತಿಳಿದ ಹಾಗೆ ಅಜ್ಜಿ ಹೆಸರನ್ನು ಮೊಮ್ಮಗಳಿಗೆ ಇಟ್ಟಿದ್ದು ಕೇಳಿಲ್ಲ. ನಿಮಗೆ ಏನಾದ್ರು ಗೊತ್ತೆ ?)

ಮೊದ್ಲೆಲ್ಲಾ ಉದ್ದ ಉದ್ದ ಹೆಸ್ರು ಇರ್ತಾಯಿತ್ತು. ಈಗೇ ಎರಡೇ ಅಕ್ಷರ ಇರೋ ಹೆಸ್ರು ಜಾಸ್ತಿ. ಮುಂದೊಂದು ದಿನ ಒಂದೇ ಅಕ್ಷರ ಬರಬಹುದು.

ಇನ್ನು ಕೆಲವರು ಬುದ್ದಿ (?) ಬಂದಮೇಲೆ ಅಥವಾ ಎಲ್ಲರೂ ತಮ್ಮ ಹೆಸರು ಹೇಳ್ಲಿಕ್ಕೆ ಅನುಕೂಲ ಆಗ್ಲಿ ಅಂತ ಶಾರ್ಟ್
ಮಾಡ್ಕೋತಾರೆ. ಕ್ರಿಷ್ಣಪ್ಪ ಅಂತ ಇದ್ದವರು ಶಾರ್ಟ್ ಆಗಿ ಕ್ರಿಸ್ ಅಂತನೋ ಇಟ್ಕೋತಾರೆ. ಇನ್ನು ನನ್ನ ಫ್ರೆಂಡ್ ದರಣೇಂದ್ರ ಮೂರ್ತಿ ತೈವಾನ್ ನಲ್ಲಿದಾನೆ. ಪಾಪ ಅಲ್ಲಿಯವರಿಗೆ ಇವನ ಹೆಸರು ಉಚ್ಚಾರಣೆ ಮಾಡೋಕೆ ಒದ್ದಾಡ್ತಾಯಿದ್ರು ಅನ್ಸತ್ತೆ. ಈಗ ಡ್ಯಾನ್ ಅಂತ ಇಟ್ಕೊಂಡಿದಾನೆ. ಇರ್ಲಿ, ಅವರ ಮರ್ಜಿ ಅಲ್ವಾ?

ಈಗ ನನ್ನೆಸ್ರಿಗೆ ಬರೋಣ. ನನ್ನೆಸ್ರು ಒಂತರಾ ವಿಚಿತ್ರ. ಹುಡುಕಿದ್ರೆ ಏಲ್ಲೋ ಒಂದಿಬ್ಬರು ಸಿಗಬಹುದು. ಹುಟ್ಟಿದಾಗ ಇಟ್ಟಿದ್ದು ಮಹೇಶ (ಈಗಲೂ ನಮ್ಮೂರಿಗೆ ಹೋಗಿ ಯಜ್ಞೇಶ್ ಅಂದ್ರೆ ಇಲ್ಲಿ ಯಾರು ಇಲ್ಲ ಅಂತಾರೆ, ಹಾಗೆ ಆಫೀಸಿಗೆ ಬಂದು ಮಹೇಶ್ ಅಂದ್ರೆ ಸೇಮ್ ರಿಪ್ಲೈ.) 2 ವರ್ಷ ಆದ್ಮೇಲೆ ಯಜ್ಞೇಶ್ವರನಿಗೆ ಆಹುತಿಯಾಗೋಕೆ ಹೋಗಿ, ಹಿರಿಯವರು ಮಾಡಿದ ಅದೃಷ್ಟದ ಪಲವಾಗಿ ಮರುಜನ್ಮ ಪಡೆದು ಬಂದ್ ಮೇಲೆ ಯಜ್ಞೇಶ್ ಅಂತ ಹೆಸ್ರಿಟ್ರು.

ಒಬ್ಬೊಬ್ರು ಒಂದು ರೀತಿ ಕರಿತಾರೆ. ಬಂಗಾಳಿ ಫ್ರೆಂಡ್ ಒಬ್ಬ ಜಗಣೇಸ್ ಅಂತ ಕರಿತಾಯಿದ್ದ. ಕೊನೆಗೆ ಕೇಳಿದಾಗ ಬಂಗಾಲ ಭಾಷೆಯಲ್ಲಿ "ಯ" ಬದ್ಲು "ಜ" ಉಪಯೋಗಿಸ್ತಾರೆ. ಹಾಗೆ ಕರಿಬೇಡಪ್ಪ ಅಂದ ಮೇಲೆ ಯಗ್ನೇಸ್ ಅಂತ ಕರಿಯೋಕೆ ಶುರು ಮಾಡ್ದ. 100 ರಲ್ಲಿ 99 ಜನ ಯಗ್ನೇಸ್ ಅಂತ ಕರೀತಾರೆ. "ಜ್ಞ" ಮತ್ತು "ಗ್ನ" ನಡುವೆ ವ್ಯತ್ಯಾಸ ಇಲ್ಲದೇ ಇರೋರು ಒಂದು ಕಡೆಯಾದ್ರೆ, ನಾಲಿಗೆ ಹೊರಳದೇ ಹೇಳೋರು ಇನ್ನೊಂದು ಕಡೆ."ಗ್ನ" ಅಲ್ಲ ಅಂದ್ರೆ, "ಯಜನೇಶ್" ಅಂತಾರೆ. ಇನ್ನು ಯಾವ್ದಾದ್ರು ಕ್ರೆಡಿಟ್ ಕಾರ್ಡಿನವರು ಫೋನ್ ಮಾಡಿದ್ರೆ "may i speaking to ya ya ya.....ಅಂತ ಹೇಳಿ ಕೊನೆಗೆ narayana swamy (ನನ್ನ ಅಪ್ಪನ ಹೆಸ್ರು)ಅಂತಾರೆ. ಅವ್ರು ಏಲ್ಲಿ ಯಾ..ಯಾ.. ಅಂತ ಹೇಳಿದ್ರೋ..ತಕ್ಷಣ ನಾನೇ Yajnesh ಅಂತ ಹೇಳ್ತೀನಿ. ಹೆಸ್ರಲ್ಲೇನಿದೆ ಮಣ್ಣು ಅಂತಿರಾ??? ಜನ ನೆನಪಿಟ್ಕೊಳ್ಳೋದು ನಮ್ಮ ವ್ಯಕ್ತಿತ್ವದಿಂದ ಅಲ್ವಾ?

ನೀವು ಒಂದ್ಸಲ ನನ್ನ ಹೆಸ್ರು ಹೇಳೋಕೆ ನೋಡಿ.. ನೆನಪಿಡಿ "ಗ್ನ" ಅಲ್ಲ..."ಜ್ಞ"...

4 comments:

yaatrika said...

ನಿಮ್ಮ ಹೆಸರಿನ ಮಟ್ಟಿಗೆ ನನ್ನ ಪೂರ್ತಿ ಸಹಾನುಭೂತಿ ಇದೆ. ಜ್ಞ ಅನ್ನುವುದು ಗ್ನ ಎಂದು ಉಚ್ಚರಿಸಲ್ಪಡುವುದಕ್ಕೆ ಇನ್ನೊಂದು ಕಾರಣವೂ ಇದೆ - ಬಯಲುಸೀಮೆಯ ಕಡೆ ಅದರ ಸ್ಪೆಲ್ಲಿಂಗ್ yagnesh ಅಂತ ಬರೀತಾರೆ; ಈಗೀಗ ಏನಿದ್ರೂ ಕಂಗ್ಲಿಷ್ ಪ್ರಭಾವ ಅಲ್ವಾ, ಹಾಗೆ ಅದನ್ನು ಯಗ್ನೇಶ್ ಅಂತ ಉಚ್ಚರಿಸುತ್ತಾರೆ. ದೂ.ದ.ನಿರ್ವಾಹಕಿಯರು ಕೃತಜ್ಞತೆಯನ್ನು ಕೃತಗ್ನತೆ ಅಂತ ಹೇಳುವುದಂತೂ ಜಗತ್ಪ್ರಸಿದ್ಧ ವಿಚಾರ. ವಿಷಯಗಳು ಜ್ಞಾಪಕಕ್ಕೆ ಬರುವ ಬದಲು ಅವರಿಗೆ ಗ್ಯಾಪಕಕ್ಕೆ ಬರುತ್ತವೆ. ನಾನೂ ನನ್ನ ಬೆಂಗಳೂರು ಕಡೆಯ ಮಿತ್ರರ ಅ’ಜ್ಞ’ತೆಯನ್ನು ತುಂಬಾ ಸಲ ಸರಿಪಡಿಸಲು ಹೋಗಿ ’ಆಯಿತಪ್ಪಾ, ನೀನೇ ಸರ್ವಗ್ನ’ ಅಂತ ಬೈಸಿಕೊಂಡಿದ್ದೇನೆ. ಏನು ಮಾಡುವುದು ಹೇಳಿ :-(.

ಯಜ್ಞೇಶ್ (yajnesh) said...

ಯಾತ್ರಿಕರೇ ಧನ್ಯವಾದಗಳು,

ದೂ.ದ ದವರು ಕೃತಗ್ನತೆ ಅಂತ ಹೇಳೋದು ನೂರಕ್ಕೆ ನೂರು ಸತ್ಯ. ಜನಕ್ಕೆ ನಾಲಿಗೆ ಹೊರಳಲ್ಲವೋ ಅಥವಾ ಜ್ಞ ಮತ್ತು ಗ್ನ ನಡುವಿನ ವ್ಯತ್ಯಾಸದ ಅರಿವಿಲ್ಲವೋ ನಾ ಕಾಣೆ. ಅದನ್ನೆಲ್ಲ ಸರಿ ಮಾಡೋಕೆ ದೇವ್ರು ಬಂದ್ರು ಆಗೊಲ್ಲ.

ಈಗಿನ ಕಾಲದಲ್ಲಿ ಗ್ನ ಪ್ರಭಾವ ಜಾಸ್ತಿ. ಎಲ್ಲೇ ನನ್ನ ಹೆಸರನ್ನು ಕಂಗ್ಲೀಷ್ ನಲ್ಲಿ ಬರಿಯಕೆ ಸ್ಟಾರ್ಟ್ ಮಾಡಿದ ತಕ್ಷಣ ಅಲ್ಲ ಅಂತ ಹೇಳ್ತೀನಿ. ಎಷ್ಟೋ ಸಲ ಹೆಸರು ಸರಿ ಬರೆಸಿದ್ದು ಇದೆ. ಇನ್ನು ಕನ್ನಡದಲ್ಲಿ ಹೆಸರು ಬರೆದು ಕೊಳ್ಳೋರ ನೋಡ್ಬೇಕು. ಎಷ್ಟೋ ಜನ ಏನು ಬರೀಬೇಕು ಅಂತ ಯೋಚನೆ ಮಾಡಿದ್ರೆ, ಇನ್ನು ಕೆಲವರು ಸುಮ್ನೆ ಗೀಚ್ಕೋತಾರೆ.. ತಕ್ಷಣ ಅವರಿಗೆ ಗೊತ್ತಿಲ್ಲ ಅಂತ ನಂಗೆ ಗೊತ್ತಾಗತ್ತೆ.ಹಹಹ

shridhar said...

ನಿಮ್ಮ ಹೆಸರೊಂದಿಂಗೆ ಇರುವ ದುರಂತ ಕೇಳಿ ದುಃಖ ಆಯಿತು .. ಏನಾದರಾಗಲಿ ಯಜ್ಞೇಶ ಅನ್ನೋದು ಒಂದು ಉತ್ತಮವಾದ ಹೆಸರು .. ಜ್ಞ ಕಾರವು ಗ್ನ ಆಗಿಯೂ ಕೆಲವು ಕಡೆ ಬಳಸಲ್ಪಡುತ್ತದೆ ..ಇದೊಂದು ವಿದೇಶಿ ಪದ .. ರಾಷ್ಟ್ರ ಭಾಷೆ ಹಿಂದಿಯಲ್ಲಿ ಜ್ಞಾನಿ ಅನ್ನುವ ಬದಲು ಗ್ಯಾನಿ ಅನ್ನುತ್ತಾರೆ .. ಹೀಗಾಗಿ ಹಿಂದಿ ಪ್ರಭಾವ ಜಾಸ್ತಿ ಇರುವ ಕಡೆ ಈ ಜ್ಞ ಅನ್ನುವುದು ಗ್ನ ಆಗಿದೆ .. ಎಷ್ಟೋ ಕನ್ನಡ ಕಳಿಸುವ ಗುರುಗಳು ಸಹ ಈ ಶಬ್ದವನ್ನು ತಪಾಗಿ ಬಳಸುತ್ತಾರೆ .. ಎಷ್ಟಾದರೂ ನಾವು ನಿತ್ಯೋಸ್ತವ [ ನಿತೋತ್ಸವ ] ಅನ್ನೋ ಜನ ಅಲ್ಲವೇ .. ಮೂಲತಹ ಜ್ಞ ಅನ್ನುವುದು ಸಹ ಕನ್ನಡ ಶಬ್ದವಲ್ಲ ,, ಇದು ಸಂಸ್ಕೃತದಿಂದ ಬಂದಂತಹುದು ಅನ್ನುವುದು ನನ್ನ ಅನಿಸಿಕೆ .. ಯಾರಿಗಾದರೂ ಸರಿಯಾಗಿ ತಿಳಿದಿದ್ದರೆ ದಯವಿಟ್ಟು ತಿಳಿಸಿ ...

ನಿಮ್ಮ ಈ ಲೇಖನ ನಿಜವಾಗಿಯೂ ಹಾಸ್ಯ ಪ್ರಧಾನವಾಗಿದೆ .. ಮಾತು ಮಾತಿನಲ್ಲೇ ನೀವು ನಿಮ್ಮ ನೋವನ್ನು ಹೇಳಿದ್ದಿರಿ ಹಾಗೆಯೆ ಜನರಲ್ಲಿ ಒಂದು ಪ್ರಜ್ಞೆ ಸಹ ಬರುವಂತೆ ಮಾಡಿದ್ದಿರಿ .. ಉತ್ತಮ ಬರಹ

Nagabhushan said...

hingella kasta beda anthane naavu "bhavaa" antha kereyadu...